– ಮಂಗಳೂರಿನ ಖ್ಯಾತ ವಕೀಲನ ವಿರುದ್ಧ ದೂರು
– ಕಚೇರಿಗೆ ಬೀಗ ಹಾಕಿ ಗಣೇಶ್ ನಾಪತ್ತೆ
ಮಂಗಳೂರು: ಮಂಗಳೂರಿನ ಪ್ರಸಿದ್ದ ವಕೀಲ ಕೆ.ಎಸ್.ಎನ್ ರಾಜೇಶ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ.
ನಗರದ ಕರಂಗಾಲ್ಪಡಿಯ ರಾಜೇಶ್ ಭಟ್ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡುತ್ತಿದ್ದ ಕಾನೂನು ವಿದ್ಯಾರ್ಥಿನಿ ಈ ಆರೋಪವನ್ನು ಮಾಡಿದ್ದು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್‍ಡಿಕೆ
Advertisement
ಸೆಪ್ಟೆಂಬರ್ 25ರಂದು ವಿದ್ಯಾರ್ಥಿನಿಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದು, ಈ ವಿಚಾರವನ್ನು ಬಹಿರಂಗಗೊಳಿಸದಂತೆ ರಾಜೇಶ್ ಬೆದರಿಕೆಯನ್ನು ಹಾಕಿದ್ದ ಎಂದು ಸಂತ್ರಸ್ತೆ ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಘಟನೆಯ ಬಳಿಕ ವಿದ್ಯಾರ್ಥಿನಿಗೆ ದೂರವಾಣಿ ಕರೆ ಮಾಡಿರುವ ರಾಜೇಶ್ ನನ್ನಿಂದ ತಪ್ಪಾಗಿದೆ ಎಂದು ಗೋಗರೆದಿದ್ದಾರೆ. ಈ ಆಡಿಯೋ ಸಹ ವೈರಲ್ ಆಗಿದ್ದು, ನಿನ್ನೆ ಮಹಿಳಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
Advertisement
Advertisement
ರಾಜೇಶ್ ಲೈಂಗಿಕ ದೌರ್ಜನ್ಯ ನೀಡಿರುವುದಲ್ಲದೇ ಸಂತ್ರಸ್ತೆಯ ಸ್ನೇಹಿತೆಗೂ ಬೆದರಿಕೆ ಹಾಕಿರುವ ದೂರು ದಾಖಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿ ಹಾಗೂ ರಾಜೇಶ್ ಭಟ್ ಫೋನ್‍ನಲ್ಲಿ ಮಾತನಾಡಿರುವ ಆಡಿಯೋವನ್ನು ಲೀಕ್ ಮಾಡಿದ್ದು, ನೀನೇ ಎಂದು ಆರೋಪಿಸಿ ಈ ಹಿಂದೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆ ಸ್ನೇಹಿತೆಗೆ ತನ್ನ ಕಡೆಯವರಿಂದ ಬೆದರಿಕೆ ಹಾಕಿಸಿದ್ದಾರೆ. ಹೀಗಾಗಿ ಸಂತ್ರಸ್ತೆಯ ಸ್ನೇಹಿತೆಯು ಈ ಬಗ್ಗೆ ದೂರು ನೀಡಿದ್ದು ರಾಜೇಶ್ ಸೇರಿದಂತೆ ಬೆದರಿಕೆ ಹಾಕಿದ ಇತರ ಸಿಬ್ಬಂದಿ ವಿರುದ್ಧವು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ
Advertisement
ಪ್ರಕರಣ ದಾಖಲಾಗುತ್ತಿದ್ದಂತೆ ತನ್ನ ಕಚೇರಿಗೆ ಬೀಗ ಹಾಕಿ ರಾಜೇಶ್ ನಾಪತ್ತೆಯಾಗಿದ್ದಾರೆ. ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕಚೇರಿ ಇದ್ದ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು ಸಿ.ಸಿ ಕ್ಯಾಮೆರಾ ಫೂಟೇಜ್ ವಶಪಡಿಸುವಂತೆ ಸೂಚನೆ ನೀಡಿದ್ದಾರೆ. ಈ ನಡುವೆ ಆರೋಪಿ ವಕೀಲ ರಾಜೇಶ್ ಭಟ್ ಅಜ್ಞಾತ ಸ್ಥಳದಿಂದ ಸ್ಪಷ್ಟನೆಯ ವೀಡಿಯೋ ರಿಲೀಸ್ ಮಾಡಿದ್ದು ನನ್ನ ವಿರುದ್ಧ ಇಬ್ಬರು ಯುವತಿಯರು ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ