ನವದೆಹಲಿ: ಪೊಲೀಸರು ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನ (Lawrence bishnoi gang) ಸಹಚರನ ನಡುವೆ ಗುಂಡಿನ ಚಕಮುಕಿ ನಡೆದ ಘಟನೆ ದೆಹಲಿಯ (Delhi) ಕುತುಬ್ ಮಿನಾರ್ ಮೆಟ್ರೋ ನಿಲ್ದಾಣದ (Qutub Minar metro station) ಬಳಿ ನಡೆದಿದೆ.
ಹರಿಯಾಣದ (Haryana) ಜಜ್ಜರ್‍ನ ನಿರಜ್ ಅಲಿಯಾಸ್ ಕತಿಯಾ (30) ಪೊಲೀಸರ ಮೇಲೆ ಎರಡು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಪ್ರತಿಯಾಗಿ ಪೊಲೀಸರು ಆತ್ಮರಕ್ಷಣೆಗಾಗಿ (Self defence) ಎರಡು ಬಾರಿ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಮತ್ತೊಂದು ಎನ್‌ಕೌಂಟರ್‌ಗೆ ಗುಂಡು ಹಾರಿಸಿದ್ದ ವ್ಯಕ್ತಿಯೂ ಸಾವು
ಆರೋಪಿಯ ಮೇಲೆ ಕೊಲೆ, ಅಪಹರಣ, ದರೋಡೆ ಸೇರಿದಂತೆ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದ್ದು, ತಲೆಮರೆಸಿಕೊಂಡಿದ್ದ. ಭಾನುವಾರ ಮುಂಜಾನೆ 3 ಗಂಟೆಗೆ ಆರೋಪಿ ಮೆಟ್ರೋ ನಿಲ್ದಾಣದ ಬಳಿ ಬರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಬಂಧಿತನಿಂದ ಅರೆ ಸ್ವಯಂ ಚಾಲಿತ ಪಿಸ್ತೂಲ್ (Semi automatic pistol) ಹಾಗೂ ಎರಡು ಕಾಟ್ರಿಡ್ಜ್‌ಗಳನ್ನು (Cartridges) ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಡೆಲಿವರಿಯಾದ ತಕ್ಷಣ ಹೆಣ್ಣು ಶಿಶುವನ್ನು ಕೊಂದ 15ರ ಬಾಲಕಿ