ಚಂಡೀಗಢ: ಗುರುಗ್ರಾಮ್‌ನಲ್ಲಾದ (Gurugram) ಬಾಂಬ್ ಸ್ಫೋಟದ (Bomb Attack) ಹಿಂದೆ ತಮ್ಮ ಕೈವಾಡವಿರುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi Gang) ಸಹಚರರು ಹೊಣೆ ಹೊತ್ತುಕೊಂಡಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಹಚರರಾದ ರೋಹಿತ್ ಗೋಡಾರಾ ಹಾಗೂ ಗೋಲ್ಡಿ ಬ್ರಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಗುರುಗ್ರಾಮ್ ಸೆಕ್ಟರ್ 29ರ ಬಾರ್‌ನ ಹೊರಗೆ ಬಾಂಬ್ ಸ್ಫೋಟ್‌ದ ಬಗ್ಗೆ ತಿಳಿಸಿದ್ದಾರೆ.ಇದನ್ನೂ ಓದಿ: ವಿದ್ಯುತ್ ಕಂಬವನ್ನೂ ಸೇರಿಸಿ ಕಟ್ಟಡ ನಿರ್ಮಾಣ – ಅಧಿಕಾರಿಗಳಿಂದ ಬುಲ್ಡೋಜರ್ ಅಸ್ತ್ರ ಪ್ರಯೋಗ
Advertisement
Advertisement
ಪೋಸ್ಟ್ನಲ್ಲಿ ಇದು ಕೇವಲ ಸಣ್ಣ ಮಟ್ಟದ ಸ್ಫೋಟ, ಇನ್ನೂ ದೊಟ್ಟ ಮಟ್ಟದಲ್ಲಿ ಸ್ಫೋಟಗೊಳಿಸುವ ನಮ್ಮ ಬಳಿ ಇದೆ. ಬಾರ್‌ನ ಮಾಲೀಕ ಅಕ್ರಮವಾಗಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾನೆ. ಜೊತೆಗೆ ತೆರಿಗೆಯಿಂದ ವಂಚಿಸುವ ಮೂಲಕ ದೇಶದ ಸ್ಥಿತಿಗೆ ಹಾನಿಯುಂಟು ಮಾಡುತ್ತಿದ್ದಾನೆ ಎಂದು ಬಿಷ್ಣೋಯ್ ಗ್ಯಾಂಗ್ ಆರೋಪಿಸಿದೆ. ಘಟನೆಗೆ ಸಂಬAಧಿಸಿದAತೆ ಸಚಿನ್ ಎಂಬಾತನನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?
ಮಂಗಳವಾರ (ಡಿ.10) ಬಾರ್‌ನ ಹೊರಗೆ ಆರೋಪಿ ಎರಡು ಬಾಂಬ್‌ಗಳನ್ನ ಸ್ಫೋಟಿಸಿದ್ದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಆರೋಪಿ ಘಟನೆಯ ವೇಳೆ ಅಮಲಿನಲ್ಲಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
Advertisement
ಐಪಿಎಸ್ ಅಧಿಕಾರಿ ವಿಕಾಸ್ ಅರೋರಾ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಹಾಗೂ ಭದ್ರತೆಗಾಗಿ ಬಾಂಬ್ ನಿಷ್ಕ್ರೀಯ ತಂಡವನ್ನು ಕರೆಯಿಸಲಾಯಿತು. ಘಟನೆಯಿಂದ ಅಲ್ಲಿದ್ದ ವಾಹನ ಹಾಗೂ ಬೋರ್ಡ್ಗೆ ಸಣ್ಣಪುಟ್ಟ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೃತ್ಯದ ಹಿಂದಿನ ಮೂಲ ಉದ್ದೇಶವನ್ನು ತಿಳಿಯಲು ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ತುಮಕೂರು | ಕಾಂಗ್ರೆಸ್‌ನ ಮಾಜಿ ಶಾಸಕ ಆರ್. ನಾರಾಯಣ ನಿಧನ