ಬೆಂಗಳೂರು: ಕಾನೂನು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತದೆ. ನೋವಾದವರಿಗೆ ನೋವು ಮಾಡಬೇಡಿ. ಬೇರೆಯವರಿಗೆ ಕೇಡು ಮಾಡಬೇಡಿ ಎಂದು ಹೇಳುವ ಮೂಲಕ ಮಗ ನಲಪಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಚರ್ಚ್ ಸ್ಟ್ರೀಟ್ ವಿನೂತನ ಮಾದರಿ ರಸ್ತೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಮಗ ನಲಪಾಡ್ ವಿಚಾರ ಪ್ರಸ್ತಾಪಿಸಿದರು. ಮನಸ್ಸು ನೋಯಿಸುವಂತಹ ರಾಜಕೀಯ ಯಾರೂ ಮಾಡಬಾರದು. ಉತ್ತಮ ಮನುಷ್ಯರಾಗಬೇಕು. ನಾನು ಮಾಡಿದರೂ ತಪ್ಪು ಯಾರೇ ಮಾಡಿದರೂ ತಪ್ಪು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಉತ್ತಮ ಮನುಷ್ಯರಾಗಿ ಬದುಕೋಣ ಎಂದು ಹೇಳಿದ್ರು.
ಇದೇ ವೇಳೆ ಮಾಧ್ಯಮಗಳಿಗೆ ಬೋಧಿಸಿದ ಹ್ಯಾರಿಸ್, ಮಾಧ್ಯಮ ಸ್ನೇಹಿತರೇ ಒಳ್ಳೆಯದನ್ನೇ ಬರೆಯಿರಿ. ಸರ್ಕಾರದ ಅಭಿವೃದ್ಧಿ ಯನ್ನು ತೋರಿಸಿ. ಕಾನೂನು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತದೆ. ನೋವಾದವರಿಗೆ ನೋವು ಮಾಡಬೇಡಿ. ಬೇರೆಯವರಿಗೆ ಕೇಡು ಮಾಡಬೇಡಿ ಎಂದರು. ಬಿಜೆಪಿಯವರಿಗೆ ತಾಕತ್ತಿದ್ದರೆ ಶಾಂತಿನಗರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಮಾಡಲಿ ಎಂದು ಸವಾಲು ಹಾಕಿದ್ರು.
ಲೋಕಾರ್ಪಣೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಶಾಸಕ ಹ್ಯಾರಿಸ್ ಜೊತೆ ವೇದಿಕೆ ಹಂಚಿಕೊಳ್ಳದೆ, ಪಾವಗಡದಲ್ಲಿ ಸೋಲಾರ್ ಪಾರ್ಕ್ ಉದ್ಘಾಟನೆ ನೆಪದಲ್ಲಿ ತೆರಳಿದ್ರು. ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಬಾವುಟಗಳದ್ದೇ ರಾಜ್ಯಭಾರವಾಗಿತ್ತು. ಉದ್ಘಾಟನಾ ಸಮಾರಂಭ ಕಾಂಗ್ರೆಸ್ ಸಮಾವೇಶವಾಗಿ ಮಾರ್ಪಾಡಾಯ್ತು. ಹ್ಯಾರಿಸ್ ಅವರಿಂದಲೇ ಕಾರ್ಯಕ್ರಮ ನಿರೂಪಣೆ ನಡೆಯಿತು. ಶಾಂತಿನಗರ ಜನ ಹ್ಯಾರಿಸ್‍ಗೆ ಜೈಕಾರ ಹಾಕಿದ್ರು.
https://www.youtube.com/watch?v=2UAY3TFILTM