ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆಶಿವಕುಮಾರ್ ( D.K Shivakumar) ರಾಜೀನಾಮೆ ಕೊಡಬೇಕು ಎಂದು ಬಿಜೆಪಿ MLC ರವಿಕುಮಾರ್ (N.Ravikumar)ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ, ಸರ್ಕಾರ ಬೆಳಗಾವಿಯಲ್ಲಿ ಗಾಂಧಿ ಭಾರತ ಸಮಾವೇಶ ಮಾಡ್ತಿದೆ. ಗಾಂಧಿ ಭಾರತ ಮರು ನಿರ್ಮಾಣ ಮಾಡ್ತೀವಿ ಅಂತ ಕಾಂಗ್ರೆಸ್‌ನವರು ಹೇಳ್ತಿದ್ದಾರೆ. ಗಾಂಧಿ ಭಾರತ ಅಂದರೆ ಏನು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೇಳಬೇಕು. ಗಾಂಧಿಜಿ ಅಹಿಂಸೆ ಅಂತಿದ್ರು. ಆದ್ರೆ ಕರ್ನಾಟಕದಲ್ಲಿ ಹಿಂಸೆ ನಡೆಯುತ್ತಿದೆ. ಕರ್ನಾಟಕದಲ್ಲಿ ಗೋವಿನ ಕೆಚ್ಚಲು ಕತ್ತರಿಸಿದ್ದಾರೆ. ಹಸುವಿನ ಬಾಲವನ್ನು ಕಟ್ ಮಾಡಿದ್ದಾರೆ. ಸಾವಿರಾರು ಹಸುಗಳ ಮಾರಣ ಹೋಮ ಆಗ್ತಿದೆ. ಗೋ ಸುರಕ್ಷಾ ಕಾನೂನು ಇದ್ದರೂ, ಹಸುಗಳನ್ನ ಕಸಾಯಿಖಾನೆಗೆ ಕಳಿಸುತ್ತಿದ್ದಾರೆ. ಇದರ ಬಗ್ಗೆ ಸಿಎಂ, ಡಿಸಿಎಂ, ರಾಹುಲ್, ಮಲ್ಲಿಕಾರ್ಜುನ ಖರ್ಗೆಯವರು ಶ್ವೇತ ಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಕರ್ನಾಟಕದಲ್ಲಿ ಮಚ್ಚು-ಲಾಂಗು ತೆಗೆದುಕೊಂಡು ಬೀದಿ ಬೀದಿಯಲ್ಲಿ ಓಡಾಡುತ್ತಿದ್ದಾರೆ. ಹಿಂಸೆ ತಾಂಡವ ಆಡುತ್ತಿದೆ. ಕರ್ನಾಟಕ ಕ್ರೈಮ್‌ಗೆ ಹೆಸರಾಗುತ್ತಿದೆ. ಕರ್ನಾಟಕ ರಾಜ್ಯ ಬಿಹಾರ ಆಗ್ತಿದೆ. ಇದೇನಾ ನಿಮ್ಮ ಕನಸಿನ ಗಾಂಧಿ ಭಾರತ? ಮಂಗಳೂರಿನ ಬ್ಯಾಂಕ್‌ನಲ್ಲಿ ದರೋಡೆ ಆಗಿದೆ. ಸಿಸಿ ಟಿವಿ ಫೋಟೇಜ್ ಇಲ್ಲ. ಏನ್ ಮಾಡ್ತಿದೆ ನಿಮ್ಮ ಪೊಲೀಸ್ ಇಲಾಖೆ? ಅಂತರ್ ರಾಜ್ಯ ದರೋಡೆಕೋರರಿಗೆ ಕರ್ನಾಟಕ ಸ್ವರ್ಗ ಆಗಿದೆ. ಕರ್ನಾಟಕ ಸುರಕ್ಷಿತ ರಾಜ್ಯ ಅಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಬಗ್ಗೆ ರಿಪೋರ್ಟ್ ತರಿಸಿಕೊಳ್ಳಿ ಮೊದಲು.ನಿಮ್ಮ ಗಾಂಧಿ ಭಾರತ ಕರ್ನಾಟಕದಲ್ಲಿ ಹೇಗಿದೆ ಅಂತ ರಾಹುಲ್, ಖರ್ಗೆ ಮಾಹಿತಿ ಪಡೆಯಲಿ ಎಂದು ಕಿಡಿಕಾರಿದ್ದಾರೆ.
Advertisement
Advertisement
ನೀರು, ವಿದ್ಯುತ್ ದರ, ಮದ್ಯ, ಬೆಲೆ ಏರಿಕೆ ಆಗ್ತಿದೆ. ಯಾವಾಗ ಹಣ ಬೇಕೋ ಆಗ ಬೆಲೆ ಏರಿಕೆ ಮಾಡ್ತಾರೆ. ಇದು ಕಾಂಗ್ರೆಸ್‌ನ ಹೊಸ ಪಾಲಿಸಿಯಾಗಿದೆ. ಅಧಿಕಾರಿಗಳು ಭ್ರಷ್ಟರಂತೆ ಇವರು ಪ್ರಾಮಾಣಿಕರಂತೆ. ಅಧಿಕಾರಿಗಳು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಗಾಂಧಿ ಕಂಡ ಭಾರತ ಮಾಡ್ತಿರೋದು ಕಾಂಗ್ರೆಸ್‌ನವರಲ್ಲ. ನರೇಂದ್ರ ಮೋದಿಯವರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಮುಡಾ ಕೇಸ್ ನಲ್ಲಿ ಸಿಎಂ ಸಿಲುಕಿ ಹಾಕಿಕೊಳ್ಳುವ ರೀತಿ ಇದ್ದಾರೆ. ಅದಕ್ಕೆ ಇವರೇ ಕ್ಲೀನ್ ಚಿಟ್ ಕೊಡಿಸಿಕೊಳ್ಳೋಕೆ ಹೋಗ್ತಿದ್ದಾರೆ. ಮುಡಾ ಕೇಸ್ CBIಗೆ ಕೊಡಿ. ವಾಲ್ಮೀಕಿ ಕೇಸ್ CBI ಗೆ ಕೊಡಿ. ಸಿದ್ದರಾಮಯ್ಯ ಹಿಂದೆ ಯಡಿಯೂರಪ್ಪ ಮೇಲೆ ಆರೋಪ ಬಂದಾಗ ರಾಜೀನಾಮೆ ಕೊಡಿ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ. ಈ ಸರ್ಕಾರ ಲೂಟಿ ಮಾಡ್ತಿದೆ. ಸರ್ಕಾರದ ದುಡ್ಡಿನಲ್ಲಿ ಬೆಳಗಾವಿಯಲ್ಲಿ ಯಲ್ಲಮ್ಮನ ಜಾತ್ರೆ, ಕಾಂಗ್ರೆಸ್ ಜಾತ್ರೆ ಮಾಡ್ತಿದ್ದಾರೆ. ರಾಹುಲ್, ಮಲ್ಲಿಕಾರ್ಜುನ ಖರ್ಗೆಯವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಾಂಧಿಜಿ ಬಗ್ಗೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್‌ನವರು, ಅಮಿತ್ ಶಾ ಅಲ್ಲ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಭಾರತರತ್ನ ಕೊಡಲಿಲ್ಲ. ಶವ ಸಂಸ್ಕಾರಕ್ಕೆ ಹಣ ಕೊಡಲಿಲ್ಲ. ಅಂಬೇಡ್ಕರ್ ಅವರನ್ನ ಸೋಲಿಸಿದ್ರಿ. ದೆಹಲಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ನಮಗೆ ಅವತ್ತು ಅಧಿಕಾರ ಇದಿದ್ದರೆ ಅಂಬೇಡ್ಕರ್ ಅವರನ್ನೇ ಪ್ರಧಾನಿ ಮಾಡುತ್ತಿದ್ದೆವು. ಲಜ್ಜೆಗೆಟ್ಟ ಕಾಂಗ್ರೆಸ್ ಅಂಬೇಡ್ಕರ್ ಅವರನ್ನ ಸೋಲಿಸಿದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಕಾನೂನು ಸುವ್ಯವಸ್ಥೆ ಬಗ್ಗೆ ಕ್ರಮ ತೆಗೆದುಕೊಳ್ಳದೇ ಹೋದ್ರೆ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.