ಚಾಕ್ಲೇಟ್ ಎಲ್ಲರಿಗೂ ಇಷ್ಟ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಚಾಕ್ಲೇಟ್ ಎಂದರೆ ಹುಚ್ಚೆದ್ದು ಇಷ್ಟಪಡುವವರೂ ಇದ್ದಾರೆ. ಅಂತಹ ಚಾಕೋಹಾಲಿಕ್‌ಗಳಿಗಾಗಿ ನಾವಿಂದು ಪರ್ಫೆಕ್ಟ್ ರೆಸಿಪಿಯೊಂದನ್ನು ಹೇಳಿಕೊಡಲಿದ್ದೇವೆ. ಬೇಕರಿಗಳಲ್ಲಿ ಸಿಗುವ ಚಾಕ್ಲೇಟ್ ಲಾವಾ ಕೇಕ್ ಎಂದರೆ ಎಂತಹವರ ಬಾಯಲ್ಲೂ ನೀರು ಬರುತ್ತದೆ. ಈ ರೆಸಿಪಿಯನ್ನು ಸಿಂಪಲ್ ಆಗಿ ಮನೆಯಲ್ಲೇ ಹೇಗೆ ಮಾಡ್ಬೋದು ಎಂದು ನಾವಿಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಬೆಣ್ಣೆ – ಅರ್ಧ ಕಪ್
ಸಿಹಿ ಚಾಕ್ಲೇಟ್ – 100 ಗ್ರಾಂ
ಸಕ್ಕರೆ ಪುಡಿ – 1 ಕಪ್
ಮೊಟ್ಟೆ – 2
ಮೊಟ್ಟೆಯ ಹಳದಿ ಭಾಗ – 2
ವೆನಿಲ್ಲಾ ಸಾರ – ಅರ್ಧ ಟೀಸ್ಪೂನ್
ಮೈದಾ ಹಿಟ್ಟು – ಕಾಲು ಕಪ್
ಉಪ್ಪು – ಚಿಟಿಕೆ
ವೆನಿಲ್ಲಾ ಐಸ್ ಕ್ರೀಂ ಮತ್ತು ತಾಜಾ ಹಣ್ಣುಗಳು – ಐಚ್ಛಿಕ ಇದನ್ನೂ ಓದಿ: ವಿಂಟರ್ ಸೀಸನ್‌ಗೆ ಟೇಸ್ಟಿ ಮೆಕ್ಸಿಕನ್ ಹಾಟ್ ಚಾಕ್ಲೇಟ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಓವನ್ ಅನ್ನು 220 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿಕೊಳ್ಳಿ. ಮತ್ತು ಪುಟ್ಟ ಪುಟ್ಟ ಕಪ್‌ಗಳಿಗೆ ಬೆಣ್ಣೆಯನ್ನು ಗ್ರೀಸ್ ಮಾಡಿ ಬದಿಗಿಡಿ.
* ಮೈಕ್ರೋವೇವ್ ಸೇಫ್ ಬೌಲ್‌ನಲ್ಲಿ ಬೆಣ್ಣೆ ಮತ್ತು ಚಾಕ್ಲೇಟ್ ಅನ್ನು ಹಾಕಿ ಬಿಸಿ ಮಾಡಿ. ಅದು ಸಂಪೂರ್ಣ ಕರಗುವವರೆಗೆ ನಯವಾಗಿ ಬೆರೆಸಿಕೊಳ್ಳಿ.
* ಬಳಿಕ ಸಕ್ಕರೆ ಪುಡಿಯನ್ನು ಹಾಕಿ ಕರಗಿಸಿಕೊಳ್ಳಿ.
* ನಂತರ ಮೊಟ್ಟೆ, ಮೊಟ್ಟೆಯ ಹಳದಿ ಭಾಗ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ ನಯವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಅದಕ್ಕೆ ಮೈದಾ ಹಿಟ್ಟು ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಗ್ರೀಸ್ ಮಾಡಿದ ಕಪ್‌ಗಳಿಗೆ ತಯಾರಿಸಿಟ್ಟ ಮಿಶ್ರಣವನ್ನು ಹಾಕಿ.
* ಕಪ್‌ಗಳನ್ನು ಓವನ್‌ನಲ್ಲಿಟ್ಟು ಸುಮಾರು 12-14 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕೇಕ್‌ನ ಅಂಚು ಮಾತ್ರವೇ ಬೆಂದು ಮಧ್ಯಭಾಗ ಇನ್ನೂ ಮೃದುವಾಗಿರಬೇಕೆಂದರೆ ಹೆಚ್ಚು ಬೇಯಿಸಬೇಡಿ.
* ಈಗ ಕೇಕ್‌ಗಳನ್ನು 1 ನಿಮಿಷ ತಣ್ಣಗಾಗಲು ಬಿಡಿ. ನಂತರ ಅದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಜೋಡಿಸಿ.
* ನೀವು ಬಯಸುತ್ತೀರಾದರೆ ವೆನಿಲ್ಲಾ ಐಸ್ ಕ್ರೀಮ್ ಹಾಗೂ ತಾಜಾ ಹಣ್ಣುಗಳಿಂದ ಅಲಂಕರಿಸಿದರೆ ಚಾಕ್ಲೆಟ್ ಲಾವಾ ಕೇಕ್ ಸಿದ್ಧವಾಗುತ್ತದೆ. ಇದನ್ನು ಬೆಚ್ಚಗಿರುವಾಗಲೇ ಸವಿಯಿರಿ. ಇದನ್ನೂ ಓದಿ: ಮನೆಯಲ್ಲೇ ಮಾಡಿ ನೋಡಿ ನ್ಯಾಚುರಲ್ ಆಪಲ್ ಜೆಲ್ಲಿ