ದುಬೈ: ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುರುಷರ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಕ್ಕೆ ಮಹಿಳಾ ಅಂಪೈರ್ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ 23 ವರ್ಷದ ಲಾರೆನ್ ಅಜೆನ್‍ಬ್ಯಾಗ್ ಅವರು ಇಂತಹ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಐಸಿಸಿ, ಜೋಹಾನ್ಸ್‌ಬರ್ಗ್ ನಲ್ಲಿ ಸೆಂಟ್ರಲ್ ಗೌಡೆಂಗ್ ಲಯನ್ಸ್ ಮತ್ತು ಬೋಲ್ಯಾಂಡ್ ನಡುವೆ ಗುರುವಾರದಿಂದ ಶನಿವಾರದವೆರೆಗೆ ಸಿಎಸ್‍ಎ ಫಸ್ಟ್ ಕ್ಲಾಸ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಅಜೆನ್‍ಬ್ಯಾಗ್ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.
Advertisement
Advertisement
ಲಾರೆನ್ ಇದೇ ವರ್ಷ ಫೆಬ್ರವರಿಯಲ್ಲಿ ಕೇಪ್ ಟೌನ್‍ನಲ್ಲಿ ನಡೆದ ಮಹಿಳಾ ಟಿ-20 ಪಂದ್ಯದಲ್ಲಿ ಅಂಪೈರ್ ಆಗಿದ್ದರು. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಅಂಪೈರ್ ಆಗಿ ಲಾರೆನ್ ನಡೆದ ಕಾರ್ಯ ನಿರ್ವಹಿಸಿದ್ದರು. ಕಳೆದ ತಿಂಗಳು ನಡೆದ ಮಹಿಳಾ ಟಿ-20 ವಿಶ್ವಕಪ್ ಅರ್ಹತಾ ಫೈನಲ್ ಮತ್ತು ಪ್ಲೇ-ಆಫ್‍ಗಳಲ್ಲಿ ಐಸಿಸಿನ ಮಹಿಳಾ ಅಂಪೈರ್ ಗಳ ಪಟ್ಟಿಯಲ್ಲಿ ಲಾರೆನ್ ಸೇರಿಕೊಂಡಿದ್ದಾರೆ. ಈ ಬೆನ್ನಲೇ ಪುರುಷರ ಪಂದ್ಯಕ್ಕೆ ಅಂಪೈರ್ ಆಗುವ ಅವಕಾಶ ಅವರಿಗೆ ಒದಗಿದೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಕೊರ್ರಿ ವ್ಯಾನ್ ಜೈಲ್, ಲಾರೆನ್ ದಕ್ಷಿಣಾ ಆಫ್ರಿಕಾದ ಮಹಿಳಾ ಅಂಪೈರ್‌ಗಳಿಗೆ ಮಾದರಿಯಾಗಲಿದ್ದಾರೆ. ಸಾಧನೆಗೆ ಕೊನೆ ಎನ್ನುವುದಿಲ್ಲ. ಆದರೆ ಅದಕ್ಕೆ ನಿರಂತರ ಪ್ರಯತ್ನ ಹಾಗೂ ಸಮರ್ಪಣೆ ಬೇಕು. ಲಾರೆನ್ ಇತರರಿಗೆ ಮಾದರಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.