ಬೆಂಗಳೂರು: ವಿಶ್ವದ ಅತ್ಯಂತ ದುಬಾರಿ ಭೂಮಿಯ ಇಮೇಜಿಂಗ್ ಉಪಗ್ರಹದೊಂದಿಗೆ ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡಲು ಭಾರತ-ಯುಎಸ್ ಜಂಟಿಯಾಗಿ ಕೈಗೊಂಡಿರುವ ಮಿಷನ್ ಅಂತಿಮ ಹಂತದಲ್ಲಿದೆ. ಇಸ್ರೋ (ISRO) ಹಾಗೂ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಉಪಗ್ರಹವು 2024 ರ ಮೊದಲ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ ಎಂದು ಹಿರಿಯ ನಾಸಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಸಾದ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯದ ನಿರ್ದೇಶಕಿ ಲಾರಿ ಲೆಶಿನ್, ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISAR) ಉಪಗ್ರಹವು ಭೂಕಂಪಗಳು ಮತ್ತು ಸುನಾಮಿಯಂತಹ ಅಪಾಯಗಳನ್ನು ಊಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೋ ಮುಖ್ಯಸ್ಥ ಸೋಮನಾಥ್, ಗಾಲ್ಫರ್ ಅದಿತಿ ಸೇರಿದಂತೆ 68 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ- Full List
Advertisement
Advertisement
ಇಸ್ರೋ-ನಾಸಾ ಅಭಿವೃದ್ಧಿಪಡಿಸುತ್ತಿರುವ ಉಪಗ್ರಹ ನಿಸಾರ್ (NISAR). ಇದು ಇಡೀ ಭೂಮಿಯನ್ನು 12 ದಿನಗಳಲ್ಲಿ ನಕ್ಷೆ ಮಾಡುತ್ತದೆ. ಗ್ರಹದ ಪರಿಸರ ವ್ಯವಸ್ಥೆ, ಮಂಜುಗಡ್ಡೆಯ ದ್ರವ್ಯರಾಶಿ, ಸಸ್ಯವರ್ಗ, ಸಮುದ್ರ ಮಟ್ಟ ಏರಿಕೆ, ಅಂತರ್ಜಲ ಮಟ್ಟ ಮತ್ತು ನೈಸರ್ಗಿಕ ಅಪಾಯಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಸ್ಥಿರವಾದ ಡೇಟಾವನ್ನು ಒದಗಿಸುತ್ತದೆ. ಭೂಕಂಪಗಳು, ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕುಸಿತ ಬಗ್ಗೆಯೂ ಮಹತ್ವದ ಡೇಟಾ ಒದಗಿಸಲಿದೆ.
Advertisement
ಹವಾಮಾನ ಬದಲಾವಣೆಯ ಪರಿಣಾಮ ಹಾಗೂ ಭೂಮಿಯ ಮೇಲ್ಮೈ ಹೇಗೆ ಬದಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ NISAR ಉಪಗ್ರಹ ನಮಗೆ ಸಹಕಾರಿಯಾಗಲಿದೆ. ಕರಗುತ್ತಿರುವ ಮಂಜುಗಡ್ಡೆಗಳು ಮತ್ತು ಕಾಡುಗಳ ವಾತಾವರಣ ಬದಲಾಗುತ್ತಿರುವ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ
Advertisement
ನಾಸಾ ಮತ್ತು ಇಸ್ರೋ ನಡುವಿನ ಸಹಯೋಗದಿಂದ ನಾವು ತುಂಬಾ ರೋಮಾಂಚಿತರಾಗಿದ್ದೇವೆ. ಇದು ಎರಡು ರಾಷ್ಟ್ರಗಳ ನಡುವಿನ ದೊಡ್ಡ ತಾಂತ್ರಿಕ ಸಹಯೋಗವಾಗಲಿದೆ. ನಾವು ಬೆಂಗಳೂರಿನಲ್ಲಿ ಏಕಕಾಲಕ್ಕೆ 30 ಅಥವಾ 40 ಇಂಜಿನಿಯರ್‌ಗಳನ್ನು ಹೊಂದಿದ್ದೇವೆ. ಇಸ್ರೋ ಸಹೋದ್ಯೋಗಿಗಳಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇವೆ. 2024 ರ ಮೊದಲ ತ್ರೈಮಾಸಿಕದಲ್ಲಿ NISAR ಉಪಗ್ರಹ ಉಡಾವಣೆ ಮಾಡುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.