ಮಂಡ್ಯ: ದನದ ಜಾತ್ರೆ ನಡೆಸುವ ವಿಚಾರವಾಗಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಪೊಲೀಸರು ಒಂದಿಬ್ಬರೂ ರೈತರ ಮೇಲೆ ಲಾಠಿ ಚಾರ್ಜ್ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೇಮಗಿರಿಯಲ್ಲಿ ಜರುಗಿದೆ.
Advertisement
ಹೇಮಗಿರಿಯಲ್ಲಿ ಪ್ರತಿವರ್ಷ ಹತ್ತು ದಿನಗಳ ಕಾಲ ದನದ ಜಾತ್ರೆ ನಡೆಯುತ್ತದೆ. ಕಳೆದ ಎರಡು ವರ್ಷದಿಂದ ಕೊರೊನಾ ಕಾರಣವಾಗಿ ಈ ಜಾತ್ರೆ ಜರುಗಿರಲಿಲ್ಲ. ಅದೇ ರೀತಿ ಈ ಬಾರಿಯೂ ಸಹ ಜಿಲ್ಲಾಡಳಿತ ಕೊರೊನಾ ಕಾರಣದಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಯಾವುದೇ ಜಾತ್ರೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ರೈತರು ಕಳೆದ ಎರಡು ವರ್ಷದಿಂದ ಜಾತ್ರೆ ಮಾಡಿಲ್ಲ. ಈ ಬಾರಿಯಾದರೂ ಜಾತ್ರೆ ಮಾಡಬೇಕೆಂದು ಸಿದ್ಧತೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯನವ್ರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ: ಬಿಜೆಪಿ ವ್ಯಂಗ್ಯ
Advertisement
Advertisement
ಅದರಂತೆ ಇಂದು ಹೇಮಗಿರಿಗೆ ನೂರಾರು ರೈತರು ಸಾವಿರಾರು ಸಂಖ್ಯೆಯಲ್ಲಿ ದನಗಳನ್ನು ಕರೆತಂದಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಈ ಬಾರಿಯೂ ಸಹ ಜಾತ್ರೆ ನಡೆಸುವಂತಿಲ್ಲ. ಎಲ್ಲರೂ ತಮ್ಮ-ತಮ್ಮ ಊರುಗಳಿಗೆ ಹೊರಡಿ ಎಂದು ಹೇಳಿದ್ದಾರೆ. ಈ ವೇಳೆ ರೈತರು ರಾಜಕಾರಣಿಗಳು ಸಮಾವೇಶ, ಸಭೆ, ಸಮಾರಂಭಗಳನ್ನು ಮಾಡಬಹುದು, ಆಗ ಕೊರೊನಾ ನಿಯಮಗಳು ಬರುವುದಿಲ್ಲ. ರೈತರು ಎಂದಾಕ್ಷಣ ನಿಮಗೆ ಕೊರೊನಾ ನಿಯಮ ನೆನಪಿಗೆ ಬರುತ್ತದೆ ಎಂದು ಪೊಲೀಸರ ನಡುವೆ ಮಾತಿನ ಚಕಮಕಿಗೆ ನಡೆದಿದೆ.
Advertisement
ಪೊಲೀಸರು ಜಾತ್ರೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ರೈತರಿಗೆ ಹೇಳಿದ್ದಾರೆ. ಈ ಮಾತನ್ನು ರೈತರು ಒಪ್ಪಿಕೊಳ್ಳದ ಕಾರಣ ಪೊಲೀಸರು ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಈ ವೇಳೆ ಒಂದಿಬ್ಬರು ರೈತರಿಗೆ ಗಾಯಗಳಾಗಿದೆ. ಈ ಕಾರಣಕ್ಕೆ ರೈತರು ಅಲ್ಲೇ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ರೈತರ ಆಕ್ರೋಶಕ್ಕೆ ಮಣಿದ ಪೊಲೀಸರು ಕೊರೋನಾ ನಿಯಮ ಪಾಲಿಸಕೊಂಡು ಜಾತ್ರೆ ನಡೆಸಿ ಎಂದು ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ