ತಾಳಿ ಜೊತೆಗೆ ಕಾಲುಂಗುರ ಕೂಡ ಭಾರತೀಯ ವಿವಾಹಿತ ಮಹಿಳೆಯ ಸಂಕೇತವಾಗಿದೆ. ಸಾಮಾನ್ಯವಾಗಿ ಬೆಳ್ಳಿ ಕಾಲುಂಗುರವನ್ನು ಮದುವೆಯ ಸಮಯದಲ್ಲಿ ಗಂಡನ ಕೈಯಿಂದ ಹೆಂಡತಿಯ ಕಾಲಿನ ಎರಡನೇ ಬೆರಳಿಗೆ ಹಾಕಿಸುತ್ತಾರೆ. ಅಂದಿನಿಂದ ಮಹಿಳೆಯರು ಕಾಲುಂಗುರವನ್ನು ಬಿಚ್ಚುವಂತಿಲ್ಲ. ಕಾಲಿನ ಎರಡನೇ ಬೆರಳು, ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುವುದರಿಂದ ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣದ ನಾಡಿಯನ್ನು ನಿಯಂತ್ರಣದಲ್ಲಿಡಲು ಕಾಲುಂಗುರ ಸಹಾಯಕವಾಗಿದೆ ಎನ್ನಲಾಗುತ್ತೆ. ಕಾಲುಂಗುರ ಋತು ಚಕ್ರ ಸಮಸ್ಯೆಯನ್ನು ಪರಿಹರಿಸುವಲ್ಲಿ, ಸಂತಾನ ಸಮಸ್ಯೆಯನ್ನು ದೂರಮಾಡುವಲ್ಲಿ ಕಾಲುಂಗುರ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅಲ್ಲದೇ ಒತ್ತಡದ ಜೀವನ ಶೈಲಿಯನ್ನು ಹೊಂದಿರುವ ಮಹಿಳೆಯರಿಗೆ ಕಾಲುಂಗುರ ಅತ್ಯುತ್ತಮವಾಗಿದೆ.
ಇಷ್ಟೇಲ್ಲಾ ಪ್ರಾಮುಖ್ಯತೆ ಇರುವ ಕಾಲುಂಗುರದಲ್ಲಿ ಇದೀಗ ಹಲವಾರು ರೀತಿಯ ಡಿಸೈನ್‍ಗಳಿದ್ದು, ಅವುಗಳಲ್ಲಿ ನಿಮಗೆ ಸೂಟ್ ಆಗುವಂತಹ ಕೆಲವೊಂದು ಕಾಲುಂಗುರ ಡಿಸೈನ್‍ಗಳ ಕುರಿತ ಮಾಹಿತಿ ಈ ಕೆಳಗಿನಂತಿದೆ.
ಪ್ಲೇನ್ ಬೆಳ್ಳಿ ಕಾಲುಂಗುರ:
ಸಿಂಪಲ್ ಪ್ಲೇನ್ ಬೆಳ್ಳಿ ಕಾಲುಂಗುರವನ್ನು ನೀವು ಪ್ರತಿನಿತ್ಯ ಧರಿಸಬಹುದಾಗಿದೆ. ಇದನ್ನು ಸ್ಟರ್ಲಿಂಗ್ ಸಿಲ್ವರ್‍ನಿಂದ ತಯಾರಿಸಲಾಗಿರುವುದರಿಂದ ಕಪ್ಪಾಗುತ್ತದೆ ಎಂದು ಭಯಪಡುವ ಅಗತ್ಯವಿರುವುದಿಲ್ಲ. ಈ ಕಾಲುಂಗುರಗಳು ತುಂಬಾ ದಪ್ಪಗಿರುವುದಿಲ್ಲ, ಹಾಗೆತೇ ತುಂಬಾ ತೆಳ್ಳಗು ಸಹ ಇರುವುದಿಲ್ಲ. ಕಾಲ್ಬೆರಳನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಇದು ನೋಡಲು ಬಹಳ ಸಿಂಪಲ್ ಆಗಿದ್ದು, ರೌಂಡ್ ಶೇಪ್‍ನಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ
ಅಡ್ಜಸ್ಟೇಬಲ್ ಬೆಳ್ಳಿ ಕಾಲುಂಗುರ:
ಬೆಳ್ಳಿ ಕಾಲುಂಗುರಗಳಲ್ಲಿ ಅಡ್ಜ್‍ಸ್ಟೇಬಲ್ ಕಾಲುಂಗುರ ಕೂಡ ಒಂದಾಗಿದೆ. ಕಾಲ್ಬೆರಳ ಗಾತ್ರಕ್ಕೆ ಅನುಗುಣವಾಗಿ ಯಾರು ಬೇಕಾದರೂ ಇದನ್ನು ಧರಿಸಬಹುದು. ಇದು ಕೂಡ ಸ್ಟಲಿರ್ಂಗ್ ಬೆಳ್ಳಿಯಲ್ಲಿ ದೊರೆಯುತ್ತದೆ ಮತ್ತು ನೋಡಲು ಸಖತ್ ಫ್ಯಾನ್ಸಿಯಾಗಿ ಕಾಣಿಸುತ್ತದೆ. ದೈನಂದಿನ ಉಡುಗೆಗಳಿಗೆ ಸೂಟ್ ಆಗುವಂತಹ ಈ ಕಾಲುಂಗುರವನ್ನು ಯುವ ನವವಿವಾಹಿತ ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ.
ಸ್ಟೋನ್ ಬೆಳ್ಳಿ ಕಾಲುಂಗುರ:
ಬೆಳ್ಳಿಯ ಈ ಕಾಲ್ಬೆರಳ ಉಂಗುರವನ್ನು ಮದುವೆಯ ಸಮಯದಲ್ಲಿ ವಧುವಿಗೆ ನೀಡಲಾಗುತ್ತದೆ. ಈ ಕಾಲುಂಗುರವನ್ನು ಹಲವಾರು ಬಣ್ಣದ ಸ್ಟೋನ್‍ಗಳಿಂದ ತಯಾರಿಸಲಾಗಿರುತ್ತದೆ. ಇದರ ಸ್ಟೋನ್‍ಗಳು ಚಿಕ್ಕದಾಗಿರುವುದಿಲ್ಲ. ಸಾಕಷ್ಟು ದೊಡ್ಡದಾಗಿರುತ್ತವೆ ಮತ್ತು ಸಾಮಾನ್ಯವಾಗಿ ರೌಂಡ್ ಶೇಪ್‍ನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇದು ದಪ್ಪಗಿರುವುದರಿಂದ ನೋಡಲು ಬಹಳ ಸುಂದರವಾಗಿ ಕಾಣಿಸುತ್ತದೆ. ಬೆಳ್ಳಿಯಿಂದ ತಯಾರಿಸಲಾದ ಈ ಸಾಂಪ್ರದಾಯಿಕ ಕಾಲುಂಗುರ ಎಲ್ಲರ ಮಧ್ಯೆ ಎದ್ದು ಕಾಣುತ್ತದೆ.
ಫೇದರ್ ಬೆಳ್ಳಿ ಕಾಲುಂಗುರ:
ಈ ಕಾಲುಂಗುರವನ್ನು ಪಕ್ಷಿಗಳ ಗರಿಯಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಾಲುಂಗುರ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ ಕೆಲಸ ಮಾಡುವ ವೇಳೆ ಧರಿಸಲು ಉತ್ತಮವಾಗಿದೆ. ಇದನ್ನೂ ಓದಿ: ಅನುಮಾನ ವ್ಯಕ್ತಪಡಿಸಿದ ಭಾವಿ ಪತಿ- ಯುವತಿ ಆತ್ಮಹತ್ಯೆಗೆ ಶರಣು
ಡಬಲ್ ಬ್ಯಾಂಡೆಡ್ ಬೆಳ್ಳಿ ಕಾಲುಂಗುರ
ಡಬಲ್ ಬ್ಯಾಂಡೆಡ್ ಬೆಳ್ಳಿ ಕಾಲುಂಗುರಗಳು ನೋಡಲು ವಿಭಿನ್ನವಾಗಿ ಕಾಣುತ್ತವೆ. ಸಾಮಾನ್ಯವಾಗಿ ಈ ಕಾಲುಂಗುರವನ್ನು ಸ್ಟೋನ್ ಹಾಗೂ ಹೂವಿನ ಡಿಸೈನ್ ಮಾದರಿ ವಿನ್ಯಾಸಗೊಳಿಸಲಾಗಿರುತ್ತದೆ. ಕಾಲುಂಗುರದ ಮಧ್ಯದಲ್ಲಿ ವಿನ್ಯಾಸಗೊಳಿಸಿರುವ ಸ್ಟೋನ್ ಸಖತ್ ಹೈಲೈಟ್ ಆಗಿ ಕಾಣಿಸುತ್ತದೆ. ಸ್ಟರ್ಲಿಂಗ್ ಸಿಲ್ವರ್‌ನಿಂದ ತಯಾರಿಸಲಾಗಿರುವ ಡಬಲ್ ಬ್ಯಾಂಡೆಡ್ ಬೆಳ್ಳಿ ಕಾಲುಂಗುರ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.