ನವದೆಹಲಿ: ಗಾನ ಕೋಗಿಲೆ ಲತಾ ಮಂಗೇಶ್ಕರ ಅವರ ಹಾಡು ಬಾಲಿವುಡ್‍ನಲ್ಲೆ ಚಿರಪರಿಚಿತ. ಅವರ ನಿಧನಕ್ಕೆ ಬಾಲಿವುಡ್‍ನ ಅನೇಕ ನಟ ನಟಿಯರು ಸೇರಿದಂತೆ ಟ್ವೀಟ್ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ನಟ ಅಜಯ್ ದೇವಗನ್ ಟ್ವೀಟ್ ಮಾಡಿ, ಎಂದೆಂದಿಗೂ ಲತಾ ಮಂಗೇಶ್ಕರ್ ಅವರು ಐಕಾನ್. ನಾನು ಅವರ ಹಾಡುಗಳ ಪರಂಪರೆಯನ್ನು ಯಾವಾಗಲೂ ಸವಿಯುತ್ತೇನೆ. ಲತಾಜಿ ಅವರ ಹಾಡುಗಳನ್ನು ಕೇಳುತ್ತಾ ಬೆಳೆದ ನಾವು ಎಷ್ಟು ಅದೃಷ್ಟವಂತರು. ಓಂ ಶಾಂತಿ. ಮಂಗೇಶ್ಕರ್ ಕುಟುಂಬಕ್ಕೆ ಸಂತಾಪಗಳು ಎಂದು ತಿಳಿಸಿದರು.
Advertisement
An icon forever. I will always savour the legacy of her songs. How fortunate were we to have grown up listening to Lataji’s songs. Om Shanti. My deepest condolences to the Mangeshkar family????
— Ajay Devgn (@ajaydevgn) February 6, 2022
Advertisement
ನಮ್ಮ ಗೌರವಾನ್ವಿತ ಲತಾ ಮಂಗೇಶ್ಕರ್ ಅವರು ನಿಧನರಾಗಿದ್ದಾರೆಂದು ತಿಳಿದು ಆಘಾತವಾಗಿದೆ. ಅವರ ಮಧುರ ಧ್ವನಿ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಎಂದು ಇಶಾ ಡಿಯೋಲ್ ಹೇಳಿದರು.
Advertisement
Shocked & extremely heartbreaking to know that our respected & most lovely @mangeshkarlata ji has passed away. Her melodious voice will live in our hearts forever. Condolences to the family.
OM Shanti ???????? #LataMangeshkar ji pic.twitter.com/TH5NeBCCrh
— Esha Deol (@Esha_Deol) February 6, 2022
Advertisement
ಅಕ್ಷಯ್ ಕುಮಾರ್ ಅವರು ಲತಾ ಮಂಗೇಶ್ಕರ್ ಅವರ ಬಗ್ಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ. ಮೇರಿ ಆವಾಜ್ ಹಿ ಪೆಹಚಾನ್ ಹೈ, ಗರ್ ಯಾದ್ ರಹೇ ಹಾಡು ಹಾಡಿರುವ ಧ್ವನಿಯನ್ನು ಮರೆಯಲು ಹೇಗೆ ಸಾಧ್ಯ, ಲತಾ ಮಂಗೇಶ್ಕರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
Meri Awaaz Hi Pehchaan Hain, Gar Yaad Rahe…and how can one forget such a voice!
Deeply saddened by the passing away of Lata Mangeshkar ji, my sincere condolences and prayers. Om Shanti ????????
— Akshay Kumar (@akshaykumar) February 6, 2022
ಕಂಗನಾ ರನೌತ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಲತಾ ಮಂಗೇಶ್ಕರ್ ಅವರ ಫೋಟೋವನ್ನು ಹಂಚಿಕೊಂಡು ಈ ರೀತಿ ಬರೆದಿದ್ದಾರೆ. ಜೀವನದಲ್ಲಿ ಅವರನ್ನು ಎಂದಿಗೂ ಭೇಟಿಯಾಗಲಿಲ್ಲ. ಆದರೆ ಇಂದು ಅವರ ನಿಧನದಿಂದ ನನ್ನ ದುಃಖವನ್ನು ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ. ನಿಜವಾದ ಕಲಾವಿದನ ಸಾರವೆಂದರೆ ಅವರು ತಮ್ಮ ಕೆಲಸದ ಮೂಲಕ ನಮ್ಮ ರಕ್ತಪ್ರವಾಹದ ಭಾಗವಾಗಿದ್ದಾರೆ ಎಂದು ಕಂಗನಾ ಬರೆದಿದ್ದಾರೆ.
Lost a legend today… Many generations will always remember you like this, @mangeshkarlata ji???? A big loss to the entire nation.
Om Shanti. May you Rest in Peace ????????
.
.
.#NightingaleOfIndia #RestInPeace #LataMangeshkar pic.twitter.com/jiVawPuepd
— SHILPA SHETTY KUNDRA (@TheShilpaShetty) February 6, 2022
ಲತಾ ಮಂಗೇಶ್ಕರ್ ನಿಧನಕ್ಕೆ ನಟಿ ಶಿಲ್ಪಾ ಶೆಟ್ಟಿ ಸಂತಾಪ ಸೂಚಿಸಿದ್ದಾರೆ. ಇಂದು ಒಂದು ದಂತಕಥೆಯನ್ನು ಕಳೆದುಕೊಂಡಿದ್ದೇವೆ. ಅನೇಕ ತಲೆಮಾರುಗಳು ಯಾವಾಗಲೂ ನಿಮ್ಮನ್ನು ಹೀಗೆ ನೆನಪಿಸಿಕೊಳ್ಳುತ್ತವೆ. ಲತಾ ಮಂಗೇಶ್ಕರ್ ನಿಧನ ಇಡೀ ದೇಶಕ್ಕೆ ದೊಡ್ಡ ನಷ್ಟ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರು ಕೊನೆಯುಸಿರೆಳೆದಿದ್ದಾರೆ. ಮುಂಬೈನ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲ ಅಗಲಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ