ಕಲಬುರಗಿ: ಕೊನೆಯ ಕ್ಷಣದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪರೀಕ್ಷಾ ಕೇಂದ್ರ ಬದಲಾವಣೆಯಿಂದಾಗಿ ಅಭ್ಯರ್ಥಿಗಳು(Candidates) ಸಂಕಷ್ಟಕ್ಕೆ ಸಿಲುಕಿ, ಪರದಾಡಿದ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.
ಅಭ್ಯರ್ಥಿಗಳ ಹಾಲ್ ಟಿಕೆಟ್‌ನಲ್ಲಿ ಪರೀಕ್ಷಾ ಕೇಂದ್ರವಾಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಜೀವನ್ ಪ್ರಕಾಶ್ ಶಾಲೆಯ ಹೆಸರು ಇದೆ. ಈ ಸ್ಥಳಕ್ಕೆ ಬಂದು ಪರೀಕ್ಷಾ ಕೇಂದ್ರದ ಹುಡುಕಾಟ ನಡೆಸಿದಾಗ ಜೀವನಪ್ರಕಾಶ್ ಶಾಲೆಯ ಪರೀಕ್ಷಾ ಕೇಂದ್ರ ಬದಲಾಗಿರುವುದು ಗೊತ್ತಾಗಿದೆ. ಅದನ್ನು ಕಂಡು ಅಭ್ಯರ್ಥಿಗಳು ಶಾಕ್ ಆಗಿದ್ದಾರೆ. ಬೇರೆ ಪರೀಕ್ಷಾ ಕೇಂದ್ರ ಹುಡುಕಾಟಕ್ಕೆ ಪರದಾಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ಅಭ್ಯರ್ಥಿ ಪರೀಕ್ಷೆಯಿಂದ ವಂಚಿತ
Advertisement
Advertisement
ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿರುವುದಕ್ಕೆ ಶಿಕ್ಷಣ ಇಲಾಖೆ, ಕಲಬುರಗಿ ಜಿಲ್ಲಾಡಳಿತದ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.