ರಾಯಚೂರು: ಗುರು ರಾಘವೇಂದ್ರ ಸಾರ್ವಭೌಮರ 347ನೇ ಆರಾಧನಾ ಮಹೋತ್ಸವಕ್ಕೆ ಇಂದು ಉತ್ತರ ಆರಾಧನೆ ಮೂಲಕ ವಿದ್ಯುಕ್ತ ತೆರೆ ಬೀಳಲಿದೆ. ಮಂತ್ರಾಲಯದಲ್ಲಿ ವೈಭವದ ಭಕ್ತಿ ಲೋಕವೇ ಸೃಷ್ಟಿಯಾಗಿದ್ದು, ಮಠದ ಪ್ರಮುಖ ಬೀದಿಯಲ್ಲಿ ಮಹಾ ರಥೋತ್ಸವ ಜರುಗಲಿದೆ.
ಪ್ರಹ್ಲಾದ ರಾಜರಾಗಿ ರಾಯರು ಭಕ್ತರಿಗೆ ಬಹಿರ್ಮುಖವಾಗಿ ಇಂದು ದರ್ಶನ ಕೊಡುತ್ತಾರೆ ಅನ್ನೋ ನಂಬಿಕೆಯಿದೆ. ಪ್ರಹ್ಲಾದ ರಾಜರಿಗೆ ಶ್ರೀಗಳು ಹೋಲಿಯನ್ನು ಹಾಕುವ ಮೂಲಕ ವಸಂತೋತ್ಸವ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.
ಮಹಾ ರಥೋತ್ಸವಕ್ಕೂ ಮುನ್ನ ಉತ್ಸವ ವಿದ್ಯಾಪೀಠಕ್ಕೆ ತೆರಳುತ್ತದೆ, ಉತ್ಸವ ಮೂರ್ತಿ ಪ್ರಹ್ಲಾದರಾಜರು ವಿದ್ಯಾಪೀಠದಲ್ಲಿ ನಡೆಯುವ ಸಂಸ್ಕೃತಾಭ್ಯಸವನ್ನು ಪರಿಶೀಲಿಸುತ್ತಾರೆ ಅನ್ನೋದು ಇಲ್ಲಿನ ಪ್ರತೀತಿ. ಬಳಿಕ ನಡೆಯುವ ಮಹಾರಥೋತ್ಸವದಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿ ಉತ್ತರ ಆರಾಧನೆಗೆ ಮೆರಗು ನೀಡಲಿವೆ.
ಸ್ವಸ್ತಿವಾಚನ ಹಾಗೂ ಮಹಾ ಮಂಗಳಾರತಿಯೊಂದಿಗೆ ಉತ್ತರ ಆರಾಧನೆ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಮಂತ್ರಾಲಯಕ್ಕೆ ಆಗಮಿಸಿರುವ ಭಕ್ತರ ದಂಡು ಆರಾಧನಾ ವೈಭವಕ್ಕೆ ಸಾಕ್ಷಿಯಾಗಿದೆ. ಮಹಾರಥೋತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಭಕ್ತರ ಜೊತೆ ಸ್ಥಳೀಯರು ಸೇರಲಿದ್ದಾರೆ. ಈ ಬಾರಿಯೂ ರಥೋತ್ಸವ ವೇಳೆ ರಾಯರಿಗೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಟವೃಷ್ಠಿಯನ್ನು ಮಾಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv