ಬೆಂಗಳೂರು: ಬಿಸಿ ಬಿಸಿ ಬಜ್ಜಿ ತಿನ್ನಬೇಕು ಅನ್ನೋರಿಗೆ, ಇಂದು ಸಂಡೆಯಪ್ಪಾ ನಾನ್‍ವೆಜ್ ಬೇಕೇಬೇಕು ಅನ್ನೋವರಿಗೆ ಇದೊಂದು ಅಡ್ಡಾ. ಉತ್ತರ ಕರ್ನಾಟಕ ರೊಟ್ಟಿ, ಎಣ್ಣೆಗಾಯಿ ಪಲ್ಯ ತಿನ್ನಬೇಕು ಅನ್ನೋರಿಗೆ ಮತ್ತೊಂದು ಅಡ್ಡಾಕ್ಕೆ ಹೋಗಬೇಕು. ಇವೆಲ್ಲ ಒಂದೇ ಸೂರಿನಡಿ ಸಿಗೋ ಅವಕಾಶವನ್ನ ನಿಮ್ಮ ಪಬ್ಲಿಕ್ ಟಿವಿ ನೀಡಿದೆ.
Advertisement
ಹೌದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಶನಿವಾರ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಎರಡು ದಿನಗಳಿಂದ ಫುಡ್‍ಫೆಸ್ಟ್ ನಡೀತಿದೆ. ಉದ್ಘಾಟನಾ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಮಾಧವನ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು ಉಪಸ್ಥಿತರಿದ್ರು.
Advertisement
Advertisement
ಎರಡು ದಿನಗಳ ಫುಡ್‍ಫೆಸ್ಟ್ ಗೆ ಇಂದು ಕೊನೆಯ ದಿನ. ಜೊತೆಗೆ ಸಂಡೇ. ಹಾಗಾಗಿ ಫುಡ್‍ಫೆಸ್ಟ್ ಗೆ ಬನ್ನಿ. ಆಹಾರ ಮೇಳದಲ್ಲಿ ನೂರಕ್ಕೂ ಹೆಚ್ಚು ವೆಜ್ ಮಾತ್ರವಲ್ಲದೇ ನಾನ್‍ವೆಜ್ ಖಾದ್ಯಗಳ 30ಕ್ಕೂ ಹೆಚ್ಚು ಸ್ಟಾಲ್‍ಗಳನ್ನು ಹಾಕಲಾಗಿದೆ. ನಿನ್ನೆ ಪಾನಿಪುರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 7 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ, ಫುಲ್ ಏಂಜಾಯ್ ಮಾಡಿದ್ರು.
Advertisement
ಇಂದು ಭಾನುವಾರ ಹಿನ್ನೆಲೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 2 ಗಂಟೆಗೆ ಪುರುಷರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ ಇದೆ. ಜೊತೆಗೆ ಅರ್ಧ ಗಂಟೆಗೊಮ್ಮೆ ಲಕ್ಕಿ ಡ್ರಾ ಮೂಲಕ ಬಹುಮಾನ ಕೂಪನ್ ನೀಡಲಾಗುತ್ತೆ. ಸಂಜೆನೇ ಫುಡ್‍ಫೆಸ್ಟ್ ಮುಗಿದೋಗತ್ತೆ ಅನ್ನೋ ಟೆನ್ಶನ್ ಬೇಡ. ಯಾಕಂದ್ರೆ ಬೆಳಗ್ಗೆ 10.30ರಿಂದ ರಾತ್ರಿ 10 ಗಂಟೆವರೆಗೂ ಆಹಾರ ಮೇಳವಿರತ್ತೆ. ಜೊತೆಗೆ ಅಹಂ ಆತ್ಮ ಸ್ಕೂಲ್ ವತಿಯಿಂದ ನೃತ್ಯ ಕಾರ್ಯಕ್ರಮವಿದೆ. ಫುಡ್‍ಫೆಸ್ಟ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ಪಬ್ಲಿಕ್ ಟಿವಿ ಸಿಓಓ ಸಿ.ಕೆ ಹರೀಶ್ ತಿಳಿಸಿದ್ದಾರೆ.
ಭರ್ಜರಿಯಾಗಿ ನಡಿತಿರೋ ಫುಡ್ ಫೆಸ್ಟ್‍ಗೆ ಲಾಸ್ಟ್ ಡೇ ಇಂದು ಕೊನೆ ದಿನ. ಹೀಗಾಗಿ ಮಿಸ್ ಮಾಡದೇ ಪಬ್ಲಿಕ್ ಟಿವಿಯ ಆಹಾರ ಮೇಳಕ್ಕೆ ಬಂದು, ವೆರೈಟಿ ವೆರೈಟಿ ಖಾದ್ಯಗಳನ್ನ ಸವಿದು ಎಂಜಾಯ್ ಮಾಡಿ.