– ಉಗ್ರ ಕೃತ್ಯದ ಹಿಂದೆ ಪಾಕ್ ಕೈವಾಡ – ಮತ್ತೆ ಒಪ್ಪಿಕೊಂಡ ಎಲ್‌ಇಟಿ
ಇಸ್ಲಾಮಾಬಾದ್: ಅಮೆರಿಕ-ಇರಾನ್ ನಡುವೆ ಸಂಧಾನ ಮಾತುಕತೆ (Iran US Ceasefire Talks) ನಡೆಯುತ್ತಿರುವ ಹೊತ್ತಿನಲ್ಲೇ ಲಷ್ಕರ್ ಕಮಾಂಡರ್‌ನ ಸ್ಫೋಟಕ ಹೇಳಿಕೆ ಹೊರಬಂದಿದೆ. ಈ ಮೂಲಕ ಪಹಲ್ಗಾಮ್ ಉಗ್ರ ಕೃತ್ಯದ ಹಿಂದೆ ಪಾಕ್ (Pakistan) ಕೈವಾಡ ಇರೋದು ಮತ್ತೊಮ್ಮೆ ಸ್ಪಷ್ಟವಾಗಿದೆ.
ಹೌದು. ಪಹಲ್ಗಾಮ್ ಭಯೋತ್ಪಾದಕ ದಾಳಿಯು (Pahalgam Attack) ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಘನತೆ ಹೆಚ್ಚಾಗಲು ಸಹಾಯ ಮಾಡಿದೆ. ಜಾಗತಿಕ ವೇದಿಕೆಯಲ್ಲಿ ಪ್ರಾಮುಖ್ಯತೆ ಕೂಡ ಹೆಚ್ಚಾಗಿದ್ದು, ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಲೂ ಅವಕಾಶ ಸಿಕ್ಕಿದೆ ಎಂದು ಲಷ್ಕರ್-ಎ-ತೈಬಾ ಕಮಾಂಡರ್ ಅಬು ಮೂಸಾ ಕಾಶ್ಮೀರಿ ಹೇಳಿದ್ದಾನೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯಲ್ಲಿ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಬಂಧನ

ಈ ಹೇಳಿಕೆಯು ಪಾಕಿಸ್ತಾನದ ಮೇಲಿನ ಆರೋಪಗಳನ್ನ ಮತ್ತಷ್ಟು ಬಲಪಡಿಸಿದೆ. ಜೊತೆಗೆ ಅಮಾಯಕರ ರಕ್ತ ಹರಿಸಿದ ದಾಳಿಯನ್ನ ಪಾಕಿಸ್ತಾನ ರಾಜತಾಂತ್ರಿಕ ಸಾಧನವಾಗಿ ಬಳಸಿಕೊಳ್ಳುವ ಹೇಯ ಕೃತ್ಯಕ್ಕೆ ಮುಂದಾಗಿದೆ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಪಹಲ್ಗಾಮ್ ಪಾತಕಿಗಳ ಪತ್ತೆಗೆ ನೆರವಾಯ್ತು ಬುಲೆಟ್ ಶೆಲ್ ಟೆಸ್ಟಿಂಗ್ – ಬ್ಯಾಲಿಸ್ಟಿಕ್ಸ್ ಮ್ಯಾಚಿಂಗ್ ಹೇಗೆ ನಡೆಯುತ್ತೆ?
ಪಹಲ್ಗಾಮ್‌ನಲ್ಲಿ ಏನಾಗಿತ್ತು?
2025 ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಉಗ್ರರು ಅಟ್ಟಹಾಸ ಮೆರೆದಿದ್ದರು. ಸುಂದರ ತಾಣದಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ನೆತ್ತರು ಹರಿಸಿದ್ದರು ಪಾಕ್ ಉಗ್ರರು. ಇದಕ್ಕೆ ಹೆಜ್ಜೆ-ಹೆಜ್ಜೆಗೂ ದಿಟ್ಟ ಉತ್ತರ ನೀಡುತ್ತಲೇ ಬಂದಿದ್ದ ಭಾರತೀಯ ಸೇನೆ, ಪ್ರತೀಕಾರಕ್ಕಾಗಿ ಕಾಯುತ್ತಲೇ ಇತ್ತು. ಕೊನೆಗೂ ಸಿಕ್ಕ ಸಮಯ ಬಳಸಿಕೊಂಡ ಭಾರತೀಯ ಸೇನೆ (Indian Army) ನರಮೇಧ ನಡೆಸಿದ್ದ ಪಾತಕಿಗಳನ್ನು ಹತ್ಯೆಗೈದಿತು. ಶ್ರೀನಗರದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್ ಮಹಾದೇವ್ʼ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹತ್ಯೆಗೈದಿತು.

ಆದ್ರೆ ಈ ನರಮೇಧವು ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ನಿಜವಾಗಿಯೂ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳುತ್ತಿದೆಯೇ ಅಥವಾ ಇಬ್ಬಗೆಯ ನೀತಿ ಅನುಸರಿಸುತ್ತಿದೆಯೇ ಎಂಬ ಚರ್ಚೆಯನ್ನು ತೀವ್ರಗೊಳಿಸಿತು. ಆದ್ರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕ್ ಮುಖವಾಡವನ್ನ ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಳಚುತ್ತಲೇ ಬಂದಿತು. ಇದೀಗ ಇರಾನ್ – ಅಮೆರಿಕ ಮಾತುಕತೆಯ ನಡುವೆ ಲಷ್ಕರ್ ಕಮಾಂಡ್ ಹೇಳಿಕೆ ಪಾಕ್ ಬಂಡವಾಳ ಬಯಲು ಮಾಡಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್

