ಪಾಟ್ನಾ: ಪುಣೆಯಿಂದ ಬರುತ್ತಿದ್ದ ವಿಮಾನಕ್ಕೆ ಲ್ಯಾಂಡಿಂಗ್ ಸಮಯದಲ್ಲಿ ಡಿಜೆ ಲೇಸರ್ ಬೆಳಕು (Laser light) ಹಾಯಿಸಿದ ಪರಿಣಾಮ ಲ್ಯಾಂಡಿಂಗ್ ಕಾರ್ಯಾಚರಣೆ ವೇಳೆ ಸಮತೋಲನ ತಪ್ಪಿದ ಘಟನೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ (Patna Airport) ನಡೆದಿದೆ. ಆದ್ರೆ ಪೈಲಟ್‌ನ ಸಾಹಸದಿಂದಾಗಿ ಯಾವುದೇ ದುರಂತ ಸಂಭವಿಸಿದೇ ನೂರಾರು ಜೀವಗಳು ಬದುಕುಳಿದಿವೆ.
पटना एयरपोर्ट पर विमान दुर्घटनाग्रस्त होने से बची
देर रात @DGCAIndia ने पूरे मामले की जांच का आदेश कर दिया है
पुणे से पटना आ रही फ्लाइट को किसी ने लैंडिंग के समय डीजे का लेजर लाइट दिखा जिसके कारण विमान को लेंड करने में पायलट को दिक्कत हुई विमान असंतुलित हुआ #PatnaAirport pic.twitter.com/uic4Wm5qgn
— Utkarsh Singh (@utkarshs88) April 18, 2025
ಹೌದು.. ಗುರುವಾರ (ನಿನ್ನೆ) ಪುಣೆಯಿಂದ ಹೊರಟಿದ್ದ ಇಂಡಿಗೋ ವಿಮಾನ (IndiGo flight) ಪಾಟ್ನಾ ಏರ್‌ಪೋರ್ಟ್‌ನಲ್ಲಿ ಸಂಜೆ 6:40ಕ್ಕೆ ಲ್ಯಾಂಡ್ ಆಗಬೇಕಿತ್ತು. ಈ ವೇಳೆ ಯಾರೋ ಡಿಜೆ ಲೇಸರ್ ಬೆಳಕು ಹಾಯಿಸಿದ್ದಾರೆ. ಲೇಸರ್ ಬೆಳಕು ಕಾಕ್‌ಪಿಟ್‌ಗೆ ರಾಚಿದ್ದರಿಂದ ಪೈಲಟ್‌ಗೆ ಗೊಂದಲ ಉಂಟಾಗಿದೆ. ಜೊತೆಗೆ ವಿಮಾನ ನಿಯಂತ್ರಣ ಕಳೆದುಕೊಂಡಿದೆ, ಈ ವೇಳೆ ಸಮಯಪ್ರಜ್ಞೆ ತೋರಿದ ಪೈಲಟ್ ವಿಮಾನವನ್ನು ಹತೋಟಿಗೆ ತಂದು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಸಂಬಂಧ ಲೇಸರ್ ಬೆಳಕು ಹಾಯಿಸಿದ ಅಪರಿಚಿತನ ಪತ್ತೆಗೆ ಪಾಟ್ನಾ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಅತ್ತ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಡಿಜಿಸಿಎ ಆದೇಶಿಸಿದೆ.