ದೇಶದಲ್ಲೇ ಅತಿ ದೊಡ್ಡದು – ಕೇರಳದಲ್ಲಿ ಸಿಕ್ಕಿದ್ದು 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್

Public TV
1 Min Read
kerala kochi drugs

ತಿರುವನಂತಪುರಂ: ಮಾದಕವಸ್ತು ನಿಗ್ರಹ ದಳ (NCB) ಹಾಗೂ ಭಾರತೀಯ ನೌಕಾಪಡೆ (Indian Navy) ಶನಿವಾರ ಕೇರಳದ (Kerala) ಕೊಚ್ಚಿಯಲ್ಲಿ (Kochi) ವಿಶೇಷ ಕಾರ್ಯಾಚರಣೆ ನಡೆಸಿ ಬಂದರಿಗೆ ಆಗಮಿಸಿದ ನೌಕೆಯಿಂದ 134 ಚೀಲಗಳಲ್ಲಿ ತುಂಬಿದ್ದ ಮಾದಕ ವಸ್ತು (Drugs) ಪತ್ತೆ ಮಾಡಿತ್ತು. ಈ ಮಾದಕ ವಸ್ತುವಿನ ಮೌಲ್ಯ ಬರೋಬ್ಬರಿ 25,000 ಕೋಟಿ ರೂ. ಎಂದು ಎನ್‌ಸಿಬಿ ತಿಳಿಸಿದೆ.

ಎನ್‌ಸಿಬಿ ಹಾಗೂ ನೌಕಾಪಡೆ ವಶಪಡಿಸಿಕೊಂಡ ಹೈ ಪ್ಯೂರಿಟಿ ಮೆಥಾಂಪೆಟಮೈನ್‌ನ ಎಣಿಕೆ ಪೂರ್ಣಗೊಂಡಿದೆ. ಒಟ್ಟು 2,525 ಕೆಜಿ ತೂಕದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಇದರ ಬೆಲೆಯನ್ನು ಆರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಡ್ರಗ್ಸ್ನ ಗುಣಮಟ್ಟ ಪರಿಶೀಲನೆ ಬಳಿಕ ಇದರ ಬೆಲೆ 25,000 ಕೋಟಿ ರೂ. ನಷ್ಟಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೇ ಇದು ದೇಶದಲ್ಲಿಯೇ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಮಾದಕ ವಸ್ತು ಪ್ರಕರಣವಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಹಾಡಹಗಲೇ ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ ದುಷ್ಕರ್ಮಿ – ಮತ್ತೊಬ್ಬ ಮಹಿಳೆಯಿಂದ ರಕ್ಷಣೆ

ಮೂಲಗಳ ಪ್ರಕಾರ ಉತ್ಕೃಷ್ಟ ಗುಣಮಟ್ಟದ ಡ್ರಗ್ಸ್ ಅನ್ನು ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲೆಂದು ಹಡಗಿನಲ್ಲಿ ತರಲಾಗಿತ್ತು. ತನಿಖೆ ವೇಳೆ ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಲಾಗಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ಮದರ್ ಶಿಪ್ ಎಂಬ ಹಡಗಿನಲ್ಲಿ ತರಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಸಿದ್ದು ಪಟ್ಟು – ದೆಹಲಿಯಲ್ಲಿ ಬೆಂಬಲಿಗರ ಜೊತೆ ಬಲ ಪ್ರದರ್ಶನ

Share This Article