ಮೈಸೂರು: ಜಿಲ್ಲೆಯ ಎಚ್‍ಡಿ ಕೋಟೆ ತಾಲೂಕಿನ ರೈತರ ಜೀವನಾಡಿಯಾದ ತಾರಕ ಜಲಾಶಯದಿಂದ ಭಾರೀ ಪ್ರಮಾಣದ ನೀರು ಪೋಲಾಗಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೇಟ್‍ಗಳ ನಿರ್ವಹಣೆ ಸರಿ ಇದೆಯಾ ಎಂದು ಪರಿಶೀಲಿಸಲು ಭಾನುವಾರ ಬೆಳಗ್ಗೆ ಜಲಾಶಯ ನಿರ್ವಹಣೆಯ ಅಧಿಕಾರಿಗಳು ಗೇಟ್ ತೆರೆದಿದ್ದು ಬಳಿಕ ಗೇಟನ್ನು ಮುಚ್ಚಲಾಗದೇ ಪರದಾಟ ನಡೆಸಿದ್ದಾರೆ. ಇತ್ತ ಅಧಿಕಾರಿಗಳ ನಡೆಗೆ ರೈತರು ಇಡೀ ಶಾಪ ಹಾಕಿದ್ದಾರೆ.
Advertisement
Advertisement
ಐದು ವರ್ಷಗಳ ನಂತರ ಜಲಾಶಯ ತಾರಕ ಜಲಾಶಯ ತುಂಬಿದರೂ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತರಿದ್ದಾರೆ. ಈ ವೇಳೆ ಜಲಾಶಯದ ಬಳಿ ಜಮಾಯಿಸಿದ್ದ ಕೆಲ ರೈತರು ಅಧಿಕಾರಿಗಳ ನಡುವೆ ವಾಗ್ವಾದವನ್ನು ನಡೆಸಿದ್ದಾರೆ.
Advertisement
ಈ ಬಾರಿ ತಾರಕ ಜಲಾಶಯದ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾದ ಕಾರಣ ಜಲಾಶಯ ತುಂಬಲು ಕೇವಲ ಮೂರು ಅಡಿ ಮಾತ್ರ ಬಾಕಿ ತ್ತು. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳು ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿದ್ದ ರೈತರಿಗೆ ಈಗಾಗಲೇ ಹೆಚ್ಚರಿಕೆ ನೀಡಿದ್ದರು. ಆದರೆ ಇದಕ್ಕೂ ಮುನ್ನವೇ ಅಪಾರ ಪ್ರಮಾಣ ನೀರು ವ್ಯರ್ಥವಾಗಿದೆ.