ಚಿಕ್ಕಬಳ್ಳಾಪುರ: ಇದ್ದಕ್ಕಿದ್ದಂತೆ ಸಾವಿರಾರು ಮೀನುಗಳು ಒಮ್ಮೇಲೆ ವಿಲವಿಲ ಒದ್ದಾಡಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ನಡೆದಿದೆ.
ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ ಮೀನುಗಳ ಮಾರಣ ಹೋಮವೇ ನಡೆದು ಹೋಗಿದೆ. ರಾಶಿ ರಾಶಿ ಮೀನುಗಳು ಸತ್ತು ದಡ ಸೇರಿದ್ರೇ ಅಳಿದುಳಿದಿರುವ ಮೀನುಗಳು ವಿಲವಿಲ ಅಂತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಅಂದಹಾಗೆ ಗಂಗಾಧರ್-ಮಂಜುಳಮ್ಮ ದಂಪತಿ ಈ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಟೆಂಡರ್ ಪಡೆದಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿರೋ ದಂಪತಿ 2 ಲಕ್ಷ ಸಾಲ ಸೋಲ ಮಾಡಿ ಕೆರೆಯಲ್ಲಿ ಮೀನು ಮರಿಗಳನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿದ್ದರು. ಆದ್ರೆ ಕಳೆದ ಎರಡು ಮೂರು ದಿನಗಳಿಂದ ಇದ್ದಕ್ಕಿದ್ದಂತೆ ಮೀನುಗಳು ಸಾವನ್ನಪ್ಪುತ್ತಿರೋದು ಬಡದಂಪತಿಗೆ ನೋವು ತಂದಿದೆ.
Advertisement
Advertisement
ಸಾಲ ಸೋಲ ಮಾಡಿ ಮೀನು ಸಾಕಾಣಿಕೆ ಮಾಡುತ್ತಿದ್ದ ದಂಪತಿ ಮೀನುಗಳ ಸಾವಿನಿಂದ ಕಂಗಲಾಗಿದ್ದು ಮಾಡಿದ ಸಾಲ ತೀರಿಸೋದಾದ್ರೂ ಹೇಗೆ ಅಂತ ಕಣ್ಣೀರು ಸುರಿಸುತ್ತಿದ್ದಾರೆ. ಇನ್ನೂ ನಗರಸಭೆಯ ಒಳಚರಂಡಿ ಘಟಕದ ನೀರು ಕರೆಗೆ ಸೇರಿರುವುದು ಮೀನುಗಳ ಸಾವಿಗೆ ಕಾರಣ ಅಂತ ಶಂಕಿಸಿಲಾಗಿದೆ. ಮತ್ತೊಂದೆಡೆ ಚಳಿಗಾಲದಲ್ಲಿ ಅಮ್ಲಜನಕದ ಕೊರತೆಯಿಂದ ಮೀನುಗಳು ಸಾವನ್ನಪ್ಪೋದು ಸರ್ವೆ ಸಾಮಾನ್ಯ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv