ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೊಂದು ಹಗರಣ ನಡೆದಿರುವ ಆರೋಪ ಕೇಳಿಬಂದಿದೆ. ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡ್ತಿವಿ ಎಂದ ಉನ್ನತ ಶಿಕ್ಷಣ ಇಲಾಖೆಯವರು ದುಡ್ಡು ಹೊಡೆಯೋಕೆ ಹೊರಟರಾ ಅನ್ನೋ ಅನುಮಾನ ಶುರುವಾಗಿದೆ.
Advertisement
ವರ್ಗಾವಣೆಗೂ ಮುನ್ನ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತ ಅಜಯ್ ನಾಗಭೂಷಣ್ ಮುಖ್ಯಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡೋಕೆ ಸರ್ಕಾರ ಹೊರಟಿದೆ. ಆದ್ರೆ ಖರೀದಿಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ, ಗೋಲ್‍ಮಾಲ್ ನಡೆದಿರುವ ಸಾಧ್ಯತೆ ಇದೆ ಅಂತ ಹಿಂದಿನ ಆಯುಕ್ತ ಅಜಯ್ ನಾಗಭೂಷನ್ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Advertisement
Advertisement
ಕೋಟ್ಯಂತರ ರುಪಾಯಿ ವಹಿವಾಟು ನಡೆಯುವ ಆದೇಶಗಳಿಗೆ ಸರ್ಕಾರದ ಅಧಿಕಾರಿಗಳು ಸಹಿ ಹಾಕೋದು ಬಿಟ್ಟು ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ ಅವರ ಕೆಳಗೆ ಬರುವ ಭೋದಕ ಸಿಬ್ಬಂದಿ ಭಾಗ್ಯವಾನ್ ಮುದಿಗೌಡರ ಅವರಿಂದ ಸಹಿ ಮಾಡಿಸಿ ಆದೇಶ ಹೊರಡಿಸಲಾಗಿದೆ.
Advertisement
ಒಂದು ಪ್ಯಾಕೇಜ್‍ನಲ್ಲಿ ಖರೀದಿ ಮಾಡೋದು ಬಿಟ್ಟು ನಾಲ್ಕು ಪ್ಯಾಕೇಜ್‍ಗಳಲ್ಲಿ ಖರೀದಿ ಮಾಡೋಕೆ ಹೊರಟ್ಟಿದ್ದಾರೆ. ಇದರಿಂದ ಗುಣಮಟ್ಟ ಹಾಗು ಬೇರೆ ಬೇರೆ ದರಗಳು ನಿಗಧಿಯಾಗೋ ಸಾಧ್ಯತೆ ಇದೆ ಅಂತ ಅಜಯ್ ಪತ್ರ ಬರೆದಿದ್ದಾರೆ. ಆದ್ರೆ ಪತ್ರ ಬರೆದು ಒಂದು ವಾರ ಕಳೆದ್ರು ಮುಖ್ಯಕಾರ್ಯದರ್ಶಿ ಕ್ಯಾರೆ ಅಂತಿಲ್ವಂತೆ.