Connect with us

Education

ಪರೀಕ್ಷೆಯಲ್ಲಿ 98 ಅಂಕಗಳಿಸಿದ್ದ ಅಜ್ಜಿಗೆ ಲ್ಯಾಪ್‍ಟಾಪ್ ಗಿಫ್ಟ್

Published

on

ತಿರುವನಂತಪುರಂ: ಸಾಕ್ಷರತಾ ಪರೀಕ್ಷೆಯಲ್ಲಿ 98 ಅಂಕಪಡೆದಿದ್ದ 96 ವರ್ಷದ ಕಾರ್ತಿಯಾಣಿ ಅಮ್ಮ ಅವರಿಗೆ ಕೇರಳ ಸರ್ಕಾರ ಲ್ಯಾಪ್‍ಟಾಪ್ ಗಿಫ್ಟ್ ನೀಡಿದೆ.

ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಕಾರ್ತಿಯಾಣಿ ಅವರು ಕಂಪ್ಯೂಟರ್ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಕೇರಳ ರಾಜ್ಯ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಕಾರ್ತಿಯಾಣಿ ಅವರ ಮನೆಗೆ ಭೇಟಿ ನೀಡಿ, ಲ್ಯಾಪ್‍ಟಾಪ್ ವಿತರಿಸಿದ್ದಾರೆ.

ಕಾರ್ತಿಯಾಣಿ ಅವರ ಜೊತೆಗೆ ಕುಳಿತು ಕೆಲಹೊತ್ತು ಖುದ್ದಾಗಿ ಸಚಿವರೇ ಲ್ಯಾಪ್‍ಟಾಪ್ ಬಳಕೆ ಮಾಡುವ ಕುರಿತು ವಿವರಿಸಿದ್ದಾರೆ. ಈ ಮೂಲಕ ಕಾರ್ತಿಯಾಣಿ ಅವರ ಕಲಿಕೆಯ ತುಡಿತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಏನಿದು ಸಾಕ್ಷರತಾ ಪರೀಕ್ಷೆ?:
ಅನಕ್ಷರತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ಕೇರಳ ರಾಜ್ಯದಲ್ಲಿ 100% ರಷ್ಟು ಸಾಕ್ಷರತೆಯನ್ನು ಸಾಧಿಸುವ ‘ಸಾಕ್ಷರತಾ ಮಿಷನ್’ ಗುರಿಯಾಗಿದೆ. ಇದರಿಂದಾಗಿ ವೃದ್ಧರಿಗೆ, ಕಲಿಕೆ ವಂಚಿತರಿಗೆ ಓದುವಿಕೆ, ಬರಹ ಮತ್ತು ಗಣಿತ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ಬಳಿ 100 ಅಂಕದ `ಅಕ್ಷರಲಕ್ಷಂ’ ಸಾಕ್ಷರತಾ ಪರೀಕ್ಷೆ ನಡೆಸಿ, ಪ್ರಮಾಣಪತ್ರ ನೀಡಲಾಗುತ್ತದೆ.
ಬುಡಕಟ್ಟು ಜನಾಂಗ, ಮೀನುಗಾರರು ಮತ್ತು ಸ್ಲಂ-ನಿವಾಸಿಗಳಂತಹ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಗುರಿಯನ್ನು ಈ ಕಾರ್ಯಕ್ರಮದ ಅಡಿ ಹಾಕಲಾಗಿದೆ.

ಈ ವರ್ಷ ಸುಮಾರು 42,933 ಜನರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಕಾರ್ಯಕ್ರಮ ಮೂಲಕ ರಾಜ್ಯ 100% ರಷ್ಟು ಸಾಕ್ಷರತೆ ಸಾಧಿಸುವ ಹಾದಿಯಲ್ಲಿದೆ. 1991 ರ ಎಪ್ರಿಲ್ 18 ರಂದು, ರಾಜ್ಯವನ್ನು ಸಂಪೂರ್ಣ ಸಾಕ್ಷರತಾ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ, ಸುಮಾರು 18 ಲಕ್ಷ ಜನರು ಅನಕ್ಷರಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಈ ವರ್ಷ ಜನವರಿ 26 ರಂದು ರಾಜ್ಯ ಸರ್ಕಾರವು `ಅಕ್ಷರಲಕ್ಷಂ’ ಹೆಸರಿನಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *