ಬೆಂಗಳೂರು: ಮನೆಯ ಚಿಲಕ ಹಾಕದೇ ಮಲಗುವ ಸಿಲಿಕಾನ್ ಸಿಟಿ ಜನರು ಸ್ವಲ್ಪ ಎಚ್ಚರವಾಗಿರಬೇಕು. ಯಾಕೆಂದರೆ ನೀವು ಮನೆಯ ಬಾಗಿಲು ಹಾಕಿಲ್ಲ ಎನ್ನುವುದರ ಮಾಹಿತಿ ಮೇರೆಗೆ ಕಳ್ಳರು ನಿಮ್ಮ ಮನೆಗೆ ನುಗ್ಗಿ ಕಳ್ಳತನ ಮಾಡುತ್ತಾರೆ.
ಇಂತಹ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಜಫ್ರೆನ್ ಹುಸೆನ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಮೇ 6ರಂದು ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಆಗ ಅವರು ತಮ್ಮ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಟೇಬಲ್ ಮೇಲೆ ಇಟ್ಟು ಮಲಗಿದ್ದಾರೆ.
Advertisement
ಬೆಳಿಗ್ಗೆ ಜಫ್ರೆನ್ ಹುಸೆನ್ ಎದ್ದು ನೋಡಿದಾಗ ಲ್ಯಾಪ್ ಟಾಪ್ ಬ್ಯಾಗ್ ಮತ್ತು ಮೊಬೈಲ್ ಫೋನ್ ಸ್ಥಳದಲ್ಲಿ ಇರಲಿಲ್ಲ. ರಾತ್ರಿ ಟೇಬಲ್ ನಲ್ಲಿದ್ದ ವಸ್ತುಗಳು ಎಲ್ಲಿಗೆ ಹೋಯಿತು ಎಂದು ವಿಚಾರಿಸಿದ್ದಾರೆ.
Advertisement
ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕೊನೆಗೆ ಸಿಸಿಟಿವಿಯಲ್ಲಿ ಸರೆಯಾದ ದೃಶ್ಯಗಳನ್ನು ನೋಡಿದ್ದಾರೆ. ಈ ವೇಳೆ ಬೆಳಗಿನ ಜಾವ ಯುವಕನೊಬ್ಬ ಮನೆಗೆ ಎಂಟ್ರಿ ಕೊಟ್ಟು ಲ್ಯಾಪ್ ಟಾಪ್ ಮತ್ತು ಮೊಬೈಲ್ ಕದ್ದು ಪರಾರಿಯಾದ ವಿಚಾರ ಗೊತ್ತಾಗಿದೆ. ಜಫ್ರೆನ್ ಹುಸೇನ್ ಈಗ ಜಾಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
Advertisement