ಬೆಂಗಳೂರು: ಲೂಸ್ ಮಾದ ಯೋಗಿ ಅಭಿನಯದ ಲಂಕೆ ಸಿನಿಮಾ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಟೀಸರ್ ಮೂಲಕ ಸಖತ್ ಸೌಂಡ್ ಮಾಡಿದ್ದ ಲಂಕೆ ಹಾಡುಗಳ ಮೂಲಕವು ಮೋಡಿ ಮಾಡಿದೆ.
ಸೆಪ್ಟೆಂಬರ್ 10ರಂದು ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಲಂಕೆ ನಿರ್ದೇಶಕ ರಾಮ್ ಪ್ರಸಾದ್ ಎರಡನೇ ಸಿನಿಮಾ. ಬಣ್ಣ ಬಣ್ಣದ ಲೋಕ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಇವರು ಲಂಕೆ ಎನ್ನುವ ಔಟ್ ಅಂಡ್ ಔಟ್ ಕಮರ್ಶಿಯಲ್ ಸಿನಿಮಾ ಮೂಲಕ ಕಮಾಲ್ ಮಾಡಲು ಬಂದಿದ್ದಾರೆ. ಚಿತ್ರಕ್ಕೆ ಕಥೆ ಚಿತ್ರಕಥೆ ಕೂಡ ಇವರದ್ದೆ. ಟೀಸರ್ ನೋಡಿ ಪ್ರೇಕ್ಷಕರು ನೀಡುತ್ತಿರುವ ಪ್ರತಿಕ್ರಿಯೆ ಖುಷಿ ಕೊಟ್ಟಿದೆ, ಸಿನಿಮಾ ಕೂಡ ಇಷ್ಟವಾಗುತ್ತೆ ಎನ್ನುವ ಭರವಸೆಯನ್ನು ನೀಡಿದ್ದಾರೆ.
ನೈಜ ಘಟನೆ ಆಧಾರಿತ ಈ ಚಿತ್ರ ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಇದ್ದೆ ಇರುತ್ತೆ ಅದು ಸಮಯಕ್ಕೆ ತಕ್ಕ ಹಾಗೆ ಹೊರ ಬರುತ್ತದೆ ಎನ್ನುವುದು ಚಿತ್ರದ ಒನ್ ಲೈನ್ ಕಹಾನಿ. ಕಮರ್ಶಿಯಲ್ ಎಲಿಮೆಂಟ್ ಜೊತೆಗೆ ಎಲ್ಲಾ ರೀತಿಯ ಎಮೋಷನ್ ಗಳನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ. ಈ ಸಿನಿಮಾದಿಂದ ಯೋಗಿ ಇನ್ನಷ್ಟು ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ ಎನ್ನುವುದು ಚಿತ್ರದ ಬಗ್ಗೆ ನಿರ್ದೇಶಕ ರಾಮ್ ಪ್ರಸಾದ್ ಮಾತು. ಇದನ್ನೂ ಓದಿ : ಗಂಡನ ಮನೆ ಬಿಟ್ಟು ಹೋದ್ರಾ ಶಿಲ್ಪಾ ಶೆಟ್ಟಿ?
ಚಿತ್ರದಲ್ಲಿ ದಿವಂಗತ ನಟ ಸಂಚಾರಿ ವಿಜಯ್ ಕೂಡ ಅಭಿನಯಿಸಿದ್ದು, ಶರತ್ ಲೋಹಿತಾಶ್ವ, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ಶೋಬ್ ರಾಜ್, ವಾಣಿಶ್ರೀ, ಪ್ರಶಾಂತ್ ಸಿದ್ದಿ, ಸಂಗಮೇಶ್ ಉಪಾಸೆ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಕೃಷಿ ತಾಪಂಡ, ಎಸ್ಟರ್ ನರೋನ, ಕಾವ್ಯಾ ಶೆಟ್ಟಿ, ಗಾಯತ್ರಿ ಜೈರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದನ್ನೂ ಓದಿ : ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ – ಬಿಡುಗಡೆಯಾಗಲಿದೆ ಆಡಿಯೋ ಬುಕ್
ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ, ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೆಹು ಸಂಕಲನ ಚಿತ್ರಕ್ಕಿದೆ. ಪಳನಿರಾಜ್, ಅಶೋಕ್, ರವಿವರ್ಮ ಅದ್ಭುತ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ. ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಡಿ ಸುರೇಖಾ ರಾಮ್ ಪ್ರಸಾದ್, ಪಟೇಲ್ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.