CinemaKarnatakaLatestMain PostSandalwood

ಲಂಕೆ ದಹನಕ್ಕೆ ರಾಮನಾಗಿ ಯೋಗಿ ಮಾಸ್ ಕಂಬ್ಯಾಕ್

ಚಿತ್ರ: ಲಂಕೆ
ನಿರ್ದೇಶನ : ರಾಮ್ ಪ್ರಸಾದ್
ನಿರ್ಮಾಪಕ : ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್
ಸಂಗೀತ : ಕಾರ್ತಿಕ್ ಶರ್ಮಾ
ಛಾಯಾಗ್ರಹಣ : ರಮೇಶ್ ಬಾಬು
ತಾರಾಗಣ: ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಎಸ್ಟರ್ ನರೋನಾ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಇತರರು,

ಲೂಸ್ ಮಾದ ಯೋಗಿ ಅಭಿನಯದ ಬಹು‌ ನಿರೀಕ್ಷಿತ ಅದ್ಧೂರಿ ಕಮರ್ಶಿಯಲ್ ಸಿನಿಮಾ ಲಂಕೆ ಇಂದು‌ ಬಿಡುಗಡೆಯಾಗಿದೆ. ಎರಡು ವರ್ಷದ ನಂತರ ‌ಲೂಸ್ ಮಾದ ಯೋಗಿಯನ್ನು ತೆರೆ ಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಚಿತ್ರ ನೋಡಿ‌ ದಿಲ್ ಖುಷ್ ಆಗಿದ್ದು. ಎಲ್ಲೆಡೆ ಭರ್ಜರಿ ಒಪನಿಂಗ್ ಪಡೆದುಕೊಂಡಿದೆ.

ವೆಶ್ಯವಾಟಿಕೆಯಿಂದ ತುಳಿತಕೊಳಗಾದವರ ಕಥೆ ಚಿತ್ರದಲ್ಲಿದೆ. ಜೊತೆಗೆ ಒಂದೊಳ್ಳೆ ಸಂದೇಶವೂ ಇದೆ. ಚಿತ್ರದ‌ ಕಥಾನಾಯಕ ರಾಮ್. ಜೈಲಿನಿಂದ ಬಿಡುಗಡೆಯಾದ ರಾಮ್ ಜಾಕಿ ಎಂಬಾತನ ಮೂಲಕ ರೌಡಿಸಂ ಹಿನ್ನೆಲೆಯುಳ್ಳ ಕಂಟ್ರ್ಯಾಕ್ಟರ್ ನಾಯ್ಡುಗೆ ಪರಿಚಿತನಾಗುತ್ತಾನೆ‌. ಎದುರಾಳಿ ಕೃಷ್ಣಪ್ಪನ ದಾಳಿಯಿಂದ ನಾಯ್ಡುನನ್ನು ಕಾಪಾಡಿ ರಾಮ್ ಕಂಟ್ರ್ಯಾಕ್ಟರ್ ನಾಯ್ಡು ನಂಬಿಕಸ್ಥ ಶಿಷ್ಯನಾಗುತ್ತಾನೆ. ಹೀಗಿರುವಾಗ ರಾಮ್ ಗೆ ವೃದ್ಧಾಶ್ರಮ ನಡೆಸಿಕೊಂಡು ಹೋಗುತ್ತಿದ್ದ ಪಾವನಿ ಪರಿಚಯವಾಗುತ್ತಾಳೆ. ಇಬ್ಬರ ಕ್ಯೂಟ್ ಲವ್ ಸ್ಟೋರಿ ಒಂದು‌ ಕಡೆ ಸಾಗುತ್ತಿರುತ್ತೆ. ಇನ್ನೊಂದು ಕಡೆ ರಾಜಕೀಯದಲ್ಲಿ ಮಿಂಚಬೇಕೆಂದು ಕನಸು ಕಾಣುತ್ತಿದ್ದ ಮಂದಾರ ಮಾಂಸದ ಅಡ್ಡೆ‌ ನಡೆಸುತ್ತಿರುತ್ತಾಳೆ. ಪೊಲೀಸ್ ಅಧಿಕಾರಿ, ಮಿನಿಸ್ಟರ್ ಜೊತೆ ಸೇರಿ‌ ಮಂದಾರ ಆಟ ಎಗ್ಗಿಲ್ಲದೆ ನಡೆಯುತ್ತಿರುತ್ತೆ. ಒಂದಿಷ್ಟು ಟ್ವಿಸ್ಟ್ ಟರ್ನ್ ನಡುವೆ ರಾಮ್, ಪಾವನಿ, ಮಂದಾರ ಒಟ್ಟಿಗೆ‌ ಸೇರುತ್ತಾರೆ. ಇದರ‌ ನಡುವೆ ನಾಯಕ ರಾಮ್ ಇಂಟ್ರಸ್ಟಿಂಗ್ ಫ್ಲ್ಯಾಶ್‌‌‌ ಬ್ಯಾಕ್ ಚಿತ್ರಕ್ಕೆ‌ ಮತ್ತೊಂದು ಹೊಸ ತಿರುವು‌ ನೀಡುತ್ತೆ. ಫ್ಲ್ಯಾಶ್‌‌‌ ಬ್ಯಾಕ್ ಸ್ಟೋರಿ ಏನು, ಲಂಕೆಯಲ್ಲಿ ಮುಂದೇನಾಗುತ್ತೆ ಎನ್ನೊದಕ್ಕೆ ನೀವು ಸಿನಿಮಾ ನೋಡ್ಲೇಬೇಕು. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

ಲಂಕೆ ನೈಜ ಘಟನೆ ಆಧಾರಿತ ಚಿತ್ರ, ನೈಜ ಘಟನೆಯನ್ನು ಸಿನಿಮ್ಯಾಟಿಕ್ ಆಗಿ ತೋರಿಸುವಲ್ಲಿ ನಿರ್ದೇಶಕ ರಾಮ್ ಪ್ರಸಾದ್ ಯಶಸ್ವಿಯಾಗಿದ್ದಾರೆ. ಕಮರ್ಶಿಯಲ್ ಸಿನಿಮಾಗೆ ತಕ್ಕಂತೆ ಹೆಣೆದ ಸ್ಕ್ರೀನ್ ಪ್ಲೇ ಚಿತ್ರದ ಹೈಲೈಟ್. ರಾಮ್ ಪ್ರಸಾದ್ ಹಾಗೂ ತಂಡದ ಪರಿಶ್ರಮ ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿದ್ದು. ಬಹಳ ದಿನಗಳ ನಂತರ ಮಾಸ್ ಪ್ರಿಯರ‌ ಮನತಣಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಬಿಡುಗಡೆಯಾದ ಎಲ್ಲ‌ ಕಡೆಗಳಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕಲರ್ ಫುಲ್ ಹಾಡು, ಫೈಟ್ ಸೀನ್ ಗಳು ಫುಲ್ ಮಾರ್ಕ್ಸ್ ಪಡೆದುಕೊಂಡಿವೆ.

ಎಂದಿನಂತೆ ಯೋಗಿ ಆಕ್ಟಿಂಗ್, ಡಾನ್ಸ್, ಫೈಟಿಂಗ್, ಎಲ್ಲದರಲ್ಲೂ ಲೀಲಾಜಾಲವಾಗಿ ನಟಿಸಿ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ಯಾನಿ ಕುಟ್ಟಪ್ಪ, ಶರತ್ ಲೋಹಿತಾಶ್ವ ಸುಚೇಂದ್ರ ಪ್ರಸಾದ್ ಅದ್ಭುತ ನಟನೆ ಮೂಲಕ ಮಿಂಚಿದ್ದಾರೆ. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಎಸ್ಟರ್ ನರೋನ್ಹಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಲವು ವರ್ಷದ ನಂತರ ಕನ್ನಡ ಸಿನಿಮಾದಲ್ಲಿ ನಟಿಸಿರುವ ಗಾಯಿತ್ರ ಜೈರಾಮ್ ಮಿಂಚಿದ್ದಾರೆ. ಸಂಚಾರಿ ವಿಜಯ್ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿ ಗಮನ ಸೆಳೆದಿದ್ದಾರೆ. ಕಾರ್ತಿಕ್ ಶರ್ಮಾ ಹಿನ್ನೆಲೆ ಸಂಗೀತ ಹಾಗೂ ಸಂಗೀತ ಚಿತ್ರದ ಮೆರುಗು ಹೆಚ್ಚಿಸಿದ್ದು, ಭರವಸೆ ಮೂಡಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಾಹಣ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಸಾಹಸ ದೃಶ್ಯಗಳು ಕಿಕ್ ಕೊಡುತ್ತವೆ. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

ಮಾಸ್ ಕಮರ್ಶಿಯಲ್ ಚಿತ್ರಕ್ಕೆ ಬೇಕಾದ ಅದ್ದೂರಿತನ, ದೊಡ್ಡದಾದ ಸ್ಟಾರ್ ಕಾಸ್ಟ್, ಹಾಡು, ಫೈಟ್ ಸೀನ್ ಗಳು ಚಿತ್ರಕ್ಕೆ ಮೆರುಗು ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ‌ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದರೂ ಕೂಡ ಚಿತ್ರ‌ ಬಿಡುಗಡೆ ಮಾಡಲು ಧೈರ್ಯ ‌ಮಾಡಿ ಸೈ ಎನಿಸಿಕೊಂಡಿದೆ ಚಿತ್ರತಂಡ. ಮೊದಲ ದಿನ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.

ಪಬ್ಲಿಕ್ ರೇಟಿಂಗ್ : 3.5/5

Leave a Reply

Your email address will not be published.

Back to top button