ಕೊಲಂಬೋ: ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನರು ಒಂದು ತಿಂಗಳಿನಿಂದ ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡುವ ಮುನ್ನವೇ ದೇಶದಿಂದ ಮಾಲ್ಡೀವ್ಸ್‌ಗೆ ಹಾರಿದ್ದಾರೆ.
ಶನಿವಾರ ರಾಜಪಕ್ಸೆಯವರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ದೇಶದ ಆರ್ಥಿಕತೆ ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ ರಾಜಪಕ್ಸೆ ತಮ್ಮ ನಿವಾಸ ತೊರೆದು ಬುಧವಾರ ರಾಜೀನಾಮೆ ನೀಡುವುದಾಗಿ ಶನಿವಾರ ಭರವಸೆ ನೀಡಿದ್ದರು. ಇದನ್ನೂ ಓದಿ: ರಾಜಪಕ್ಸೆ U-turn? ಕುಟುಂಬ ಸುರಕ್ಷಿತ ಸ್ಥಳ ತಲುಪುವವರೆಗೆ ರಾಜೀನಾಮೆ ನೀಡಲ್ಲ
Advertisement
Sri Lankan President Gotabaya Rajapaksa flies out of the country, reports AFP News Agency quoting officials
(File Pic) pic.twitter.com/vb7LLlTJTk
— ANI (@ANI) July 12, 2022
Advertisement
ಆದರೀಗ ಬಂಧನದ ಭೀತಿಯಿಂದ ರಾಜೀನಾಮೆ ನೀಡುವುದಕ್ಕೂ ಮುನ್ನವೇ ರಾಜಪಕ್ಸೆ ಗೊಟಬಯ ಅವರು ಮಾಲ್ಡೀವ್ಸ್‌ಗೆ ತಮ್ಮ ಪತ್ನಿ ಹಾಗೂ ಇಬ್ಬರು ಅಂಗರಕ್ಷಕರೊಂದಿಗೆ ಲಂಕಾ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‍ನ ರಾಜಧಾನಿ ಮಾಲೆಗೆ ಹೊರಟಿದ್ದಾರೆ ಎಂದು ಏಜೆನ್ಸಿಗಳು ವರದಿ ಮಾಡಿವೆ. ಇದನ್ನೂ ಓದಿ: ಶಾರ್ಟ್‌ಕಟ್ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ
Advertisement
Advertisement
ಈ ಕುರಿತಂತೆ ಪ್ರತಿಕ್ರಿಯಿಸಿರುವ ವಲಸೆ ಅಧಿಕಾರಿಯೊಬ್ಬರು, ಅವರ ಪಾಸ್‍ಪೋರ್ಟ್‍ಗಳನ್ನು ಸ್ಟ್ಯಾಂಪ್ ಮಾಡಲಾಗಿದ್ದು, ವಿಶೇಷ ವಾಯುಪಡೆಯ ವಿಮಾನ ಮೂಲಕ ತೆರಳಿದರು. ವಿಮಾನಕ್ಕಾಗಿ 24 ಗಂಟೆ ಕಾದು ರಾಜಪಕ್ಸೆ ಗೊಟಬಯ ಅವರು ವಾಣಿಜ್ಯ ವಿಮಾನದಲ್ಲಿ ದುಬೈಗೆ ಹೋಗಬೇಕೆಂದುಕೊಂಡರು. ಆದರೆ ವಿಮಾನ ನಿಲ್ದಾಣ ಸಿಬ್ಬಂದಿ ಗೊಟಬಯ ರಾಜಪಕ್ಸೆ ಅವರಿಗೆ ವಿಐಪಿ ಸೇವೆಗಳನ್ನು ನೀಡಲು ನಿರಾಕರಿಸಿದರು ಮತ್ತು ಎಲ್ಲಾ ಪ್ರಯಾಣಿಕರಂತೆ ಸಾರ್ವಜನಿಕ ಕೌಂಟರ್ ಮೂಲಕ ಹೋಗಬೇಕೆಂದು ಒತ್ತಾಯಿಸಿದರು ಎಂದು ಹೇಳಲಾಗುತ್ತಿದೆ.