ಕಾರವಾರ: ಗಡಿಜಿಲ್ಲೆ ಉತ್ತರ ಕನ್ನಡಕ್ಕೂ (Uttara Kannada) ಭಾಷಾ ವಿವಾದದ (Language Controversy) ಕಿಡಿ ಹೊತ್ತಿಕೊಂಡಿದ್ದು, ಕನ್ನಡ ಸಿನಿಮಾ ಪ್ರದರ್ಶನದ ಬದಲು ಮಾರಾಠಿ ಸಿನಿಮಾ (Marathi Cinema) ಪ್ರದರ್ಶನ ಮಾಡುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಮರಾಠಿ ಪೋಸ್ಟರ್‌ಗಳಿಗೆ ಮಸಿ (Ink) ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಕಾರವಾರ (Karwar) ನಗರದ ಕಾಜುಬಾಗ್‌ನ ಅರ್ಜುನ ಸಿನಿಮಾ ಮಂದಿರದಲ್ಲಿ ಕನ್ನಡ ಸಿನಿಮಾ ಬದಲು ಮರಾಠಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿತ್ತು. ಮಾತ್ರವಲ್ಲದೇ ಕನ್ನಡ ಸಿನಿಮಾ ಪೋಸ್ಟರ್‌ಗಳನ್ನು ಕೆಳಭಾಗದಲ್ಲಿ ಹಾಕಿ, ಮೇಲ್ಭಾಗದಲ್ಲಿ ಮರಾಠಿ ಸಿನಿಮಾ ಪೋಸ್ಟರ್ ಅಳವಡಿಸಲಾಗಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು : ಸಿ.ಟಿ.ರವಿ
Advertisement
Advertisement
ಇದರಿಂದ ಆಕ್ರೋಶಕ್ಕೊಳಗಾದ ಕನ್ನಡ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಮರಾಠಿ ಪೋಸ್ಟರ್‌ಗಳನ್ನು ತೆಗೆಸಿ ನಂತರ ಪೋಸ್ಟರ್‌ಗೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಕನ್ನಡ ಸಿನಿಮಾ ಪ್ರದರ್ಶನ ಮಾಡುವಂತೆ ಚಿತ್ರಮಂದಿರದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ