ಮಂಗಳೂರು: ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿಘಾಟ್ ನಲ್ಲಿ ಮತ್ತೆ ಭೂಮಿ ಕುಸಿದಿದೆ. ಘಾಟ್ ನ 6ನೇ ತಿರುವಿನಲ್ಲಿರುವ ತಡೆಗೋಡೆ ಕುಸಿದ ಪರಿಣಾಮ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಮಳೆ ನಿರಂತರವಾಗಿ ಸುರಿದಿದ್ದು ಮರಗಿಡಗಳು ಕುಸಿಯುವ ಹಂತದಲ್ಲಿವೆ.
Advertisement
ಸ್ಥಳಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಚಾರ್ಮಾಡಿ ಘಾಟ್ ಮಾರ್ಗವನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂದು, ನಾಳೆ ಹಾಗೂ ನಾಡಿದ್ದು ಘಾಟ್‍ನಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
Advertisement
ಸೋಮವಾರ ಸುರಿದ ಮಳೆಗೆ ಎರಡನೇ ತಿರುವಿನಲ್ಲಿದ್ದ ತಡೆಗೋಡೆ ಕುಸಿದಿತ್ತು. ಸಾಕಷ್ಟು ಮಳೆ ಇದ್ದ ಕಾರಣ ತೆರವು ಕಾರ್ಯಚಾರಣೆ ಸಾಧ್ಯವಾಗಿರಲಿಲ್ಲ. ಸುಮಾರು 3 ಕಿಮೀ ದೂರದಷ್ಟು ವಾಹನಗಳು ನಿಂತು ಟ್ರ್ಯಾಫಿಕ್ ಜಾಂ ಆಗಿತ್ತು. ಹಾಗಾಗಿ ಭೂಕುಸಿತ ಉಂಟಾಗಿರುವುದನ್ನು ತೆರವುಗೊಳಿಸಲು ಜಿಲ್ಲಾಡಳಿತ 48 ಗಂಟೆಗಳ ಕಾಲಾವಕಾಶವನ್ನು ಜಿಲ್ಲಾಡಳಿತ ಕೇಳಿತ್ತು. ಅಲ್ಲೆದೇ ಪ್ರಯಾಣಿಕರಿಗೆ ಮಂಗಳೂರಿನಿಂದ ನಿಂದ ಬೆಂಗಳೂರಿಗೆ ನಾರಾವಿ, ಕಳಸ ಮೂಲಕ ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು.
Advertisement
ಆದರೆ ಈಗ ಮತ್ತೆ ಭೂ ಕುಸಿತ ಉಂಟಾಗಿರುವುದರಿಂದ ಮತ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಈ ಮಾರ್ಗವಾಗಿ ಚಲಿಸುವ ಪ್ರಯಾಣಿಕರು ಇನ್ನಿಲ್ಲದ ಪಾಡು ಪಡುವಂತಾಗಿದೆ.