– ಇಂದು ಸಂಜೆ ದೆಹಲಿಗೆ ಯಾತ್ರಿಕರು
ಹಾವೇರಿ: ಉತ್ತರಾಖಂಡದಲ್ಲಿ (Uttarakhand) ಭೂಕುಸಿತ (Landslide) ಉಂಟಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಚಾರ್‌ಧಾಮ್ ಯಾತ್ರೆಗೆ (Char Dham Yatra) ತೆರಳಿದ್ದ ಕನ್ನಡಿಗರು ಇದೀಗ ಅಪಾಯದಿಂದ ಪಾರಾಗಿದ್ದಾರೆ.
Advertisement
ಹಾವೇರಿ (Haveri) ಜಿಲ್ಲೆಯ ಚಿಕ್ಕೇರೂರು ಹಾಗೂ ತಿಳವಳ್ಳಿ ಗ್ರಾಮಗಳ 7 ಮಂದಿ ಕನ್ನಡಿಗರು (Kannadigas) ಚಾರ್‌ಧಾಮ್ ಯಾತ್ರೆಗೆಂದು ಜೂನ್ 29ರಂದು ಪ್ರವಾಸ ಆರಂಭಿಸಿದ್ದರು. ಬದರಿನಾಥನ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಉತ್ತರಾಖಂಡದ ಚೆಮೋಲಿ ಜಿಲ್ಲೆಯ ಜ್ಯೋಶಿಮಠ ಎಂಬ ಗ್ರಾಮದ ಬಳಿ ಭೂಕುಸಿತ ಉಂಟಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: 6 ತಿಂಗಳ ಹಿಂದೆ ಮೃತಪಟ್ಟಿದ್ದ ಅಧಿಕಾರಿಗೆ ವರ್ಗಾವಣೆ – ಪೌರಾಡಳಿತ ಇಲಾಖೆ ಯಡವಟ್ಟು
Advertisement
Advertisement
ಘಟನೆ ಹಿನ್ನೆಲೆ ತಮ್ಮನ್ನು ರಕ್ಷಿಸುವಂತೆ ಕನ್ನಡಿಗರು ವೀಡಿಯೋ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ರಸ್ತೆ ದುರಸ್ತಿಯಾದ ಹಿನ್ನೆಲೆ ಕನ್ನಡಿಗರು ಯಾವುದೇ ಅಪಾಯವಿಲ್ಲದೇ ವಾಪಸ್ ಆಗುತ್ತಿದ್ದಾರೆ. ಇಂದು ಸಂಜೆ ಎಲ್ಲಾ 7 ಯಾತ್ರಿಕರು ಸುರಕ್ಷಿತವಾಗಿ ದೆಹಲಿ ತಲುಪಲಿದ್ದಾರೆ. ಇದನ್ನೂ ಓದಿ: Assembly Bypolls: ಇಂಡಿಯಾ ಒಕ್ಕೂಟ 10, ಎನ್‌ಡಿಎ 2 ಕ್ಷೇತ್ರಗಳಲ್ಲಿ ಮುನ್ನಡೆ
Advertisement
7 ಮಂದಿ ಕನ್ನಡಿಗರ ವಿವರ:
ಶ್ರೀಧರ್ ಎಂ ಹೊಳಲ್ಕೇರಿ (62)2)
ಶಾಂತಾ ಎಸ್ ಹೊಳಲ್ಕೇರಿ (57)
ಅಶೋಕ್ ಎಸ್‌ವಿ (61)
ಭಾರತಿ ಎಎಸ್ (55)
ವೆಂಕಟೇಶ್ ಪಂಪನ್ (62)
ರಾಜೇಶ್ವರಿ ಪಂಪನ್ (60)
ರಾಹುಲ್ ಪಂಪನ್ (35)