ಮಂಗಳೂರು: ಗುಡ್ಡಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ತಂಗಡಿಯ ಗಂಡಿಬಾಗಿಲು ಬಳಿ ಭೂಕುಸಿತ ಸಂಭವಿಸಿದೆ.
ಭೂಕೂಸಿತದಿಂದಾಗಿ ತೋಟದಲ್ಲಿದ್ದ ಮರ, ಗಿಡಗಳು 3.5 ಕಿ.ಮೀ. ಕೊಚ್ಚಿಕೊಂಡು ಹೋಗಿವೆ. ಅನಾಹುತದಿಂದಾಗಿ ಮನೆಯಲ್ಲಿದ್ದ ಎಲಿಯಮ್ಮ(70), ರೆನ್ನಿ, ವಿಸ್ಸಿ, ಪ್ರಿಯಾ(11), ಪ್ರೀಸ್ಸಿ(13) ಗಾಯಗೊಂಡಿದ್ದು, ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಷ್ಟೇ ಅಲ್ಲದೇ ಜೋಸೆಫ್ ಎಂಬವರ ಸುಮಾರು 300 ಕ್ಕೂ ಹೆಚ್ಚು ಅಡಿಕೆ ತೋಟ ಸೇರಿ ಇನ್ನಿತರ ಕೃಷಿ ಬೆಳೆ ನಾಶವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews