ಡೆಹ್ರಾಡೂನ್: ಉತ್ತರಕಾಶಿಯಿಂದ (Uttarkashi) ಗಂಗ್ನಾನಿಗೆ (Gangnani) ತೆರಳುವ ಮಾರ್ಗದಲ್ಲಿ ಭಾರಿ ಭೂಕುಸಿತ (Landslide) ಸಂಭವಿಸಿದ ಪರಿಣಾಮ ನೆತಾಲ ಬಳಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸೋಮವಾರ ಬೆಳಗ್ಗೆ ಭೂಕುಸಿತ ಸಂಭವಿಸಿದ ಪರಿಣಾಮ ಮಣ್ಣು ರಸ್ತೆಗೆ ಬಿದ್ದು, ರಸ್ತೆ ಸಂಪೂರ್ಣ ದುಸ್ತರಗೊಂಡಿದೆ. ಈ ಹಿನ್ನೆಲೆ ಗಂಗ್ನಾನಿ ಪ್ರವೇಶ ಕಡಿತಗೊಂಡಿದೆ. ರಸ್ತೆಗೆ ಬಿದ್ದಿರುವ ಭಾರೀ ಪ್ರಮಾಣದ ಮಣ್ಣು ಹಾಗೂ ಅವಶೇಷಗಳನ್ನು ತೆಗೆದು ಸಂಚಾರವನ್ನು ಪುನಃಸ್ಥಾಪಿಸಲು ಜೆಸಿಬಿಗಳನ್ನು ನಿಯೋಜಿಸಲಾಗಿದೆ. ಆದಷ್ಟು ಬೇಗ ರಸ್ತೆಯನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ 30 ಸಂಸದರು ಪೊಲೀಸರ ವಶಕ್ಕೆ
ಉತ್ತರಕಾಶಿ ಜಿಲ್ಲೆಯಾದ್ಯಂತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಸಂಜೆ ಮತ್ತು ರಾತ್ರಿಯ ವೇಳೆಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಆರು ಗಂಟೆಗಳ ಒಳಗೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಸೇನೆ ಸೇರಲು ಸ್ವದೇಶಿ ನಿರ್ಮಿತ ಉದಯಗಿರಿ, ಹಿಮಗಿರಿ ಯುದ್ಧ ನೌಕೆಗಳು ಸಿದ್ಧ; ನೌಕಾಪಡೆಗೆ ಇನ್ನಷ್ಟು ಬಲ
ಇನ್ನು, ಭೂಕುಸಿತ ಸಂಭವಿಸುವ ಪ್ರದೇಶಗಳಲ್ಲಿ ನಿವಾಸಿಗಳು ಮತ್ತು ಪ್ರಯಾಣಿಕರು ಜಾಗರೂಕರಾಗಿರಬೇಕು ಮತ್ತು ಅನಗತ್ಯ ಸಂಚಾರವನ್ನು ತಪ್ಪಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: Chitradurga | ಕೆಆರ್ ಹಳ್ಳಿ ಗೇಟ್ ಬಳಿ ಟ್ರಾಫಿಕ್ ಜಾಮ್ – 5 ಕಿ.ಮೀ ದೂರದವರೆಗೂ ನಿಂತ ವಾಹನಗಳು