ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾದ ನಿಂಗವ್ವ ನಿಂಗವ್ವ ಸಾಂಗ್ (Ningavva Ningavva Video Song) ಬಿಡುಗಡೆ ಆಗಿದೆ.
ಭೀಮ ಚಿತ್ರದ ನಂತ್ರ ದುನಿಯಾ ವಿಜಯ್ (Duniya Vijay) ಅಭಿನಯ ಹಾಗೂ ಗುರು ಶಿಷ್ಯರು ಸಿನಿಮಾದ ನಂತ್ರ ಜಡೇಶ್ ನಿರ್ದೇಶನದಲ್ಲಿ ಬರ್ತಿರೋ ಸಿನಿಮಾ ಲ್ಯಾಂಡ್ ಲಾರ್ಡ್. ಪಕ್ಕಾ ಮಾಸ್ ಎಂಟರ್ಟೈನರ್ ಆಗಿ ಬರ್ತಿರೋ ಈ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಇತ್ತೀಚೆಗಷ್ಟೇ ರಾಜ್ ಬಿ ಶೆಟ್ಟಿಯನ್ನ ಖಡಕ್ ವಿಲನ್ ಆಗಿ ಪರಿಚಯಿಸಿದ್ದ ಲ್ಯಾಂಡ್ ಲಾರ್ಡ್ ಟೀಮ್ ಇದೀಗ ಸಿನಿಮಾದ ನಿಂಗವ್ವ ನಿಂಗವ್ವ ಹಾಡನ್ನ ರಿಲೀಸ್ ಮಾಡಿದೆ. ಲವ್ಲೀ ಸ್ಟಾರ್ ಪ್ರೇಮ್ ದಂಪತಿ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಜೋಡಿ, ತರುಣ್ ಸುಧೀರ್ ಹಾಗೂ ಸೋನಾಲ್ ಮಂಥೆರೋ ಜೋಡಿ ಈ ಹಾಡನ್ನ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ದುನಿಯಾ ವಿಜಯ್ ಹಾಗೂ ರಚಿತಾ ರಾಮ್ (Rachita Ram) ಕಾಂಬಿನೇಶನ್ ನಲ್ಲಿ ಬರೋ ಈ ಹಾಡು ಈ ಚಳಿಗೆ ಗಂಡ ಹೆಂಡತಿಗೆ ಹೇಳೊಕೆ ಪ್ರಿಯತಮ ಪ್ರಿಯತಮೆಗೆ ಹೇಳೊಕೆ ಒಂದು ಪರ್ಫೆಕ್ಟ್ ಹಾಡು ಇದಾಗಿದೆ ಅನ್ನೋದ್ರಲ್ಲಿ ನೋ ಡೌಟ್.
ಅಜನೀಶ್ ಲೋಕೆನಾಥ್ ಸಂಗೀತ ಸಂಯೋಜನೆ ಯೋಗರಾಜ್ ಭಟ್ರು ಸಾಹಿತ್ಯ ಹಾಗೂ ವಿಜಯ್ ಪ್ರಕಾಶ್ ಕಂಠ ಸೀರಿಯಲ್ಲಿ ಮೂಡಿಬಂದಿರೋ ಹಾಡು ತುಂಬಾ ಮುದ್ದಾಗಿ ಮೂಡಿ ಬಂದಿದೆ. ಹಾಡಿನ ಬಗ್ಗೆ ಮಾತನಾಡಿದ ದುನಿಯಾ ವಿಜಯ್ ರಾಚಯ್ಯ ಗೆಟಪ್ ಹಾಕಿದಾಗ ಒಂದು ಭಯ ಇತ್ತು ಹೇಗೆ ರಿಸೀವ್ ಮಾಡ್ತಾರೆ. ಜನ ಅಂತ ಈಗ ನಂಗೆ ಅನ್ಸಿದೆ ಗ್ರ್ಯಾಂಡ್ ಸಕ್ಸಸ್ ಆಗುತ್ತೆ ಅಂತ. ವಿಜಯ್ ಪ್ರಕಾಶ್ ಸರ್ ದೊಡ್ಡ ಎನರ್ಜಿ ನಂಗೆ ಒಳ್ಳೆ ಸಾಂಗ್ ಕೊಟ್ಟಿದ್ದಾರೆ ಈಗ ರೈತರ ಮನೆಯ ಪ್ರತಿನಿಧಿ ಆಗಿ ಈ ಚಿತ್ರದಲ್ಲಿ ಮಾಡಿದ್ದೀನಿ ಎಂದಿದ್ದಾರೆ ದುನಿಯಾ ವಿಜಯ್. ಸಾರಥಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಕೆವಿ ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.



