ಬೆಂಗಳೂರು: ನಮಗೆ ನಮ್ಮ ನೆಲ, ಜಲ, ಗಡಿ ವಿಚಾರ ಮುಖ್ಯ. ಗಡಿ ವಿಚಾರದಲ್ಲಿ ನಮ್ಮ ನಿಲುವನ್ನು ಅಮಿತ್ ಶಾ (Amit Shah) ಅವರಿಗೆ ಸ್ಪಷ್ಟಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ದೆಹಲಿಗೆ ಹೋಗುತ್ತಿದ್ದೇನೆ. ಗಡಿ ವಿಚಾರದ ಬಗ್ಗೆ ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. ಗಡಿ ವಿಚಾರದ ಸಭೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆ ಮಾಡ್ತೇನೆ. ನಾನು ಎಲ್ಲ ಸಿದ್ಧತೆಗಳ ಜೊತೆ ಹೋಗುತ್ತಿದ್ದೇನೆ. ಅವಕಾಶ ಸಿಕ್ಕಿದರೆ ಸಂಪುಟ ಬಗ್ಗೆ ಅಮಿತ್ ಶಾ ಅವರ ಜೊತೆ ಚರ್ಚೆ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೋಮುವಾದಿ ಪಕ್ಷ ಮಣಿಸಲು ಕಾಂಗ್ರೆಸ್ ಸೇರಲು ನಿರ್ಧಾರ – ವೈಎಸ್‌ವಿ ದತ್ತ
Advertisement
Advertisement
ಗಡಿ ವಿವಾದ ಕುರಿತು ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಆರು ದಶಕಗಳಿಂದ ಗಡಿ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ನಾವು ಹಾಗಲ್ಲ, ನಮಗೆ ನಮ್ಮ ನೆಲ-ಜಲ-ಗಡಿ ವಿಚಾರ ಮುಖ್ಯ ಎಂದು ಹೇಳಿದರು.
Advertisement
ಒಳಮೀಸಲಾತಿಗೆ ಸಂಪುಟ ಉಪಸಮಿತಿ ರಚನೆ ಕಣ್ಣೊರೆಸುವ ತಂತ್ರ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಒಳಮೀಸಲಾತಿ ಕುರಿತು ನ್ಯಾ.ಸದಾಶಿವ ವರದಿ ಕಡೆ ಐದು ವರ್ಷ ಸಿದ್ದರಾಮಯ್ಯ ತಿರುಗಿ ನೋಡಿರಲಿಲ್ಲ. ಆ ರಿಪೊರ್ಟ್ ಅನ್ನು ತೆಗೆದು ನೋಡುವ ಧೈರ್ಯವಿರಲಿಲ್ಲ. ಇದೇ ಸಮುದಾಯ ಹುಬ್ಬಳಿಯಲ್ಲಿ ಸಮಾವೇಶ ಮಾಡಿತ್ತು. ಆಗ ದೀಪ ಹಚ್ಚಿ ಮಾತ್ರ ಬಂದ್ರು ಸಿದ್ದರಾಮಯ್ಯ. ಅಂಥವರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಮಹಾ-ಕರ್ನಾಟಕ ಗಡಿ ವಿವಾದ; ಇಂದು ಮುಖಾಮುಖಿಯಾಗ್ತಾರೆ ಎರಡೂ ರಾಜ್ಯಗಳ ಸಿಎಂ
Advertisement
ನಮ್ಮ ಬದ್ದತೆ ಏನು ಅಂತ ಗೊತ್ತಿದೆ. ಅಂತಹ ಪ್ರಮುಖ ವಿಚಾರಗಳಲ್ಲಿ ದಿಟ್ಟತನ ತೆಗೆದುಕೊಂಡಿದ್ದೇವೆ. ನೀವು ಇನ್ನೊಬ್ಬರ ಬಗ್ಗೆ ಮಾತಾಡುವ ಮುಂಚೆ, ತಾವು ಯಾವ ರೀತಿ ನಡೆದುಕೊಂಡಿದ್ರಿ ಅಂತಾ ಹಿಂತಿರುಗಿ ನೋಡಿದ್ರೆ ಒಳ್ಳೆಯದು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.