– ರಕ್ಷಣಾ ಪಡೆಯಿಂದ ಯಾತ್ರಾರ್ಥಿಗಳ ರಕ್ಷಣೆ
ಕಾಠ್ಮಂಡು: ಭಾರೀ ಮಳೆ ಹಿನ್ನೆಲೆ ನೇಪಾಳದಲ್ಲಿ (Nepal) ಗುಡ್ಡ ಕುಸಿದ (Land Slide) ಪರಿಣಾಮ ಮುಕ್ತಿನಾಥ ದೇವಾಲಯಕ್ಕೆ ತೆರಳಿದ್ದ ಕನ್ನಡಿಗ ಯಾತ್ರಾರ್ಥಿಗಳು (Kannadiga Pilgrims) ರಸ್ತೆ ಮಧ್ಯೆ ಸಂಕಷ್ಟಕ್ಕೀಡಾಗಿದ್ದಾರೆ.
ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಬಂಡೆಗಳು ಕುಸಿದಿವೆ. 50 ಮಂದಿ ಯಾತ್ರಾರ್ಥಿಗಳು ಎರಡು ದಿನದ ಹಿಂದೆ ಬೆಂಗಳೂರಿನಿಂದ ನೇಪಾಳದ ಮುಕ್ತಿನಾಥ ದೇವಾಲಯಕ್ಕೆ ತೆರಳಿದ್ದರು. ಗುಡ್ಡ ಕುಸಿದ ಪರಿಣಾಮ ನೇಪಾಳದ ಪ್ರೋಕ್ರಾದಿಂದ ಮುಕ್ತಿನಾಥ ದೇವಾಲಯ ರಸ್ತೆಯಲ್ಲಿ ಯಾತ್ರಾರ್ಥಿಗಳು ಸಿಲುಕಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ
ಭಾರೀ ಮಳೆಗೆ ಗುಡ್ಡ ಕುಸಿದು ವಾಹನಗಳು ಪಲ್ಟಿಯಾಗಿವೆ. ಯಾತ್ರಾರ್ಥಿಗಳು 11 ದಿನಗಳ ಪ್ರವಾಸಕ್ಕೆಂದು ತೆರಳಿದ್ದರು. ಸದ್ಯ ಎಲ್ಲಾ ಕನ್ನಡಿಗರು ಅಪಾಯದಿಂದ ಪಾರಾಗಿರುವ ಮಾಹಿತಿ ಲಭಿಸಿದೆ. ರಕ್ಷಣಾ ಪಡೆ ಎಲ್ಲಾ ಕನ್ನಡಿಗ ಯಾತ್ರಾರ್ಥಿಗಳನ್ನು ರಕ್ಷಣೆ ಮಾಡಿದೆ. ಸದ್ಯ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇದನ್ನೂ ಓದಿ: ಕೆಂಗೇರಿಯಲ್ಲಿ ತಡೆಗೋಡೆಗೆ ಬೈಕ್ ಡಿಕ್ಕಿ – ನಾಪತ್ತೆಯಾಗಿದ್ದ ಯುವಕನ ಶವ ರಾಜಕಾಲುವೆಯಲ್ಲಿ ಪತ್ತೆ