Connect with us

ವಿಡಿಯೋ- ಹಾಡಹಗಲೇ ಬೆಂಗಳೂರಿನಲ್ಲಿ ಪುಡಿ ರೌಡಿಗಳಿಂದ ಮನೆಗೆ ನುಗ್ಗಿ ಹಲ್ಲೆ, ಬೆದರಿಕೆ

ವಿಡಿಯೋ- ಹಾಡಹಗಲೇ ಬೆಂಗಳೂರಿನಲ್ಲಿ ಪುಡಿ ರೌಡಿಗಳಿಂದ ಮನೆಗೆ ನುಗ್ಗಿ ಹಲ್ಲೆ, ಬೆದರಿಕೆ

– ದೂರು ಕೊಟ್ರೂ ಎಫ್‍ಐಆರ್ ದಾಖಲಿಸಿದ ಪೊಲೀಸ್ರು

ಬೆಂಗಳೂರು: ನಗರದಲ್ಲಿ ರೌಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಜಾಗದ ವಿಚಾರವಾಗಿ ರೌಡಿಗಳು ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ ಬೆದರಿಕೆ ಹಾಕಿರುವ ಪ್ರಕರಣವೊಂದು ರಾಮಮೂರ್ತಿ ನಗರದಲ್ಲಿ ಬೆಳಕಿಗೆ ಬಂದಿದೆ.

ರಾಮಮೂರ್ತಿ ನಗರದ ನಿವಾಸಿ ರಾಜು ಎಂಬವರ ಮನೆಗೆ ನುಗ್ಗಿ ರೌಡಿಗಳು ಗೂಮಡಾಗಿರಿ ನಡೆಸಿದ್ದಾರೆ. ಪುಡಿ ರೌಡಿಗಳು ಕಂಠಪೂರ್ತಿ ಕುಡಿದುಕೊಂಡು ರಾಜು ಮನೆಗೆ ನುಗ್ಗಿ ತಾಯಿಯ ಎದುರೇ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೇ ಬೆದರಿಕೆ ಕೂಡ ಹಾಕಿದ್ದಾರೆ.

ರಾಜು ಮೇಲೆ ಹಲ್ಲೆ ಆದ ಕೂಡಲೇ ಅವರು 100 ನಂಬರಿಗೆ ಕರೆ ಮಾಡಿದ್ದರು. ಆದ್ರೆ ಪೊಲೀಸರು ತಡವಾಗಿ ಬಂದು ಕ್ರಮ ಕೈಗೊಳ್ಳುತ್ತೇವೆ ಅಂತ ಸಮಾಧಾನ ಮಾಡಿ ಹೊರಟಿದ್ದಾರೆ. ಆದ್ರೆ ನಿನ್ನೆ ಮಧ್ಯಾಹ್ನ ಮತ್ತೆ 2 ಗಂಟೆ ಸುಮಾರಿಗೆ 20ಕ್ಕೂ ಹೆಚ್ಚು ಮಂದಿ ಕುಡಿದು ಬಂದು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ವೇಳೆ ರಾಜು ತಾಯಿ ರೌಡಿಗಳನ್ನು ತಡೆಯಲು ಮುಂದಾಗಿದ್ದಾರೆ. ಆದ್ರೆ ರೌಡಿಗಳು ರಾಜು ಮೇಲೆ ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಕೆ ಆರ್ ಪುರ ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಬೆಂಬಲಿಗರು ಈ ಗೂಂಡಾಗಿರಿ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

https://www.youtube.com/watch?v=qEVeLkOJY-0&feature=youtu.be

Advertisement
Advertisement