Connect with us

Latest

ವಿಡಿಯೋ: ಲ್ಯಾಂಬೋರ್ಗಿನಿಯನ್ನ ಓವರ್ ಟೇಕ್ ಮಾಡಿದ ಸ್ವಿಫ್ಟ್- ಭೀಕರ ಅಪಘಾತವಾಗಿ ಇಕೋ ಕಾರ್ ಚಾಲಕ ಸಾವು

Published

on

ನವದೆಹಲಿ: ಸ್ವಿಫ್ಟ್ ಡಿಸೈರ್ ಕಾರ್‍ವೊಂದು ಲ್ಯಾಂಬೋರ್ಗಿನಿ ಕಾರನ್ನ ಓವರ್ ಟೇಕ್ ಮಾಡಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೆಹಲಿ ಸಮೀಪದ ನೊಯ್ಡಾ ಸೆಕ್ಟರ್ 135 ಬಳಿ ನಡೆದಿದೆ.

ಮಾರುತಿ ಇಕೋ ವಾಹನವನ್ನ ಚಾಲನೆ ಮಾಡುತ್ತಿದ್ದ 20 ವರ್ಷದ ಯುವಕ ಮೃತ ದುರ್ದೈವಿ. ಅಪಘಾತದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರಯಾಗಿದೆ. ಮಾರುತಿ ಸ್ವಿಫ್ಟ್ ಡಿಸೈರ್, ಲ್ಯಾಂಬೋರ್ಗಿನಿ ಹಾಗೂ ಇಕೋ ಕಾರು ಒಂದರ ಪಕ್ಕ ಒಂದು ಹೋಗುತ್ತಿದ್ದವು. ಮೊದಲಿಗೆ ಸ್ವಿಫ್ಟ್ ಕಾರು ಲ್ಯಾಂಬೋರ್ಗಿನಿಯನ್ನ ಓವರ್ ಟೇಕ್ ಮಾಡಿ ಮುಂದೆ ಹೋಗಿದೆ. ಈ ವೇಳೆ ಲ್ಯಾಂಬೋರ್ಗಿನಿ ಚಾಲಕ ಸ್ವಲ್ಪ ಎಡಕ್ಕೆ ತಿರುಗಿದ್ದು, ಎಡ ಭಾಗದಲ್ಲಿ ಬರುತ್ತಿದ್ದ ಇಕೋ ಕಾರ್‍ಗೆ ಗುದ್ದಿದೆ. ಪರಿಣಾಮ ಇಕೋ ಕಾರು ಪಲ್ಟಿಯಾಗಿ ಪಕ್ಕದ ಕಾಡು ಪ್ರದೇಶದತ್ತ ಉರುಳಿಕೊಂಡು ಹೋಗಿದೆ.

ಮಾರುತಿ ಇಕೋದಲ್ಲಿದ್ದ ಯುವಕನನ್ನು ದೆಹಲಿಯ ಮಂಡವಾಲಿ ನಿವಾಸಿ ಅರ್ಶದ್ ಅಹ್ಮದ್ ಎಂದು ಗುರುತಿಸಲಾಗಿದೆ. ಅರ್ಶದ್ ಅವರನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಸ್ವಿಫ್ಟ್ ಡಿಸೈರ್‍ನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಲ್ಯಾಂಬೋರ್ಗಿನಿಯ ಚಾಲಕನನ್ನು ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *