ಯಾದಗಿರಿ: ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ನಾರಿಯರು ಬಣ್ಣ-ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿ ಹಾಡಿಗೆ ತಕ್ಕಂತೆ ಸಖತ್ ಡ್ಯಾನ್ಸ್ ಮಾಡುವ ಮೂಲಕ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ಇಡೀ ದೇಶದೆಲ್ಲೆಡೆ ಪಟಾಕಿ ಹಚ್ಚಿ ಸದ್ದು ಗದ್ದಲದಿಂದ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ಆದರೆ ಲಂಬಾಣಿ ಸಮುದಾಯದ ತಾಂಡಾ ನಿವಾಸಿಗಳು ಮಾತ್ರ ಪುರಾತನ ಕಾಲದಿಂದ ಪರಿಸರ ಕಾಳಜಿ ಉಳಿಸಿಕೊಂಡು ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ನಮೂನೆಯ ಪಟಾಕಿ ತಂದು ಸಂಭ್ರಮಿಸುವ ಬದಲು ಆ ತಾಂಡಾ ನಿವಾಸಿಗಳು ಪುರಾತನ ಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಸಂಸ್ಕೃತಿಯ ಪರಂಪರೆಯನ್ನು ಪಾಲನೆ ಮಾಡಿಕೊಂಡು ಹಬ್ಬ ಆಚರಿಸುತ್ತಾರೆ.
Advertisement
Advertisement
ಶಹಾಪುರ ತಾಲೂಕಿನ ಬಿಕ್ಕುನಾಯ್ಕತಾಂಡಾ ಹಾಗೂ ವಿವಿಧ ತಾಂಡಾಗಳಲ್ಲಿ ನೂರಾರು ರೂಪಾಯಿ ಬೆಲೆ ಬಾಳುವ ಪಟಾಕಿ ಹಚ್ಚಿ ವಾಯುಮಾಲಿನ್ಯ ಹಾಳು ಮಾಡುವ ಬದಲು ಪಟಾಕಿಯಿಂದ ದೂರವಿದ್ದು ಪರಿಸರದೊಂದಿಗೆ ಹಬ್ಬ ಆಚರಿಸಿಕೊಂಡು ಬರುವುದು ಸಂಪ್ರದಾಯವಾಗಿದೆ. ತಾಂಡಾದಲ್ಲಿ ಸಂಪ್ರದಾಯಿಕ ಉಡುಗೆ ತೊಟ್ಟು ನಾರಿಯರು ದೀಪಾವಳಿ ಸಂಭ್ರಮದಿಂದ ಆಚರಿಸುತ್ತಾರೆ. ಬಣ್ಣದ ವೈಯಾರ ಬಟ್ಟೆ ಧರಿಸಿ ನಾರಿಯರು ಸಖತ್ ಡ್ಯಾನ್ಸ್ ಮಾಡಿ ಹಬ್ಬದ ಸಂಭ್ರಮಪಡುತ್ತಾರೆ.
Advertisement
ಮದುವೆಯಾಗದ ಯುವತಿಯರು ಲಂಬಾಣಿ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು, ತಾಂಡಾದ ಮುಖ್ಯಸ್ಥರೊಬ್ಬರ ಮನೆ ಮುಂದೆ ಸೇರಿಕೊಂಡು ತಾಂಡಾದ ಹೊರಭಾಗದ ಕಾಡಿಗೆ ಹಾಡನ್ನು ಹಾಡುತ್ತಾ ತೆರಳುತ್ತಾರೆ. ನಂತರ ಕಾಡಿನಿಂದ ವಿವಿಧ ಬಣ್ಣದ ಹೂವುಗಳನ್ನು ತೆಗೆದುಕೊಂಡು ಬರುತ್ತಾರೆ. ಯುವತಿಯರು ಹೂವು ತಂದು ಮನೆಯಂಗಳದಲ್ಲಿ ಚೆಲ್ಲಿ, ಸಗಣಿಯಲ್ಲಿ ಬೆರೆಸಿ ಗ್ರಾಮ ದೇವತೆಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ನಂತರ ಗ್ರಾಮದ ಮಂದಿರದಲ್ಲಿ ಸೇರಿ ಸಂಪ್ರದಾಯದ ಉಡುಗೆ ತೊಟ್ಟು ಯುವತಿಯರು ಹಾಡನ್ನು ಹಾಡುತ್ತಾ ಹಾಡಿಗೆ ತಕ್ಕಂತ್ ಸ್ಟೇಪ್ ಹಾಕುತ್ತಾರೆ.
Advertisement
ಕೋರು ಹುಡುಗಿಯರು ಈ ದಿನ ಉಪವಾಸ ವೃತ ಆಚರಿಸಿ ಶ್ರದ್ಧಾ ಭಕ್ತಿಯಿಂದ ಬೆಳಕಿನ ಹಬ್ಬ ಆಚರಿಸುತ್ತಾರೆ. ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ಸಾಂಪ್ರದಾಯಿಕ ನೃತ್ಯ ಮಾಡಿ ಸಂಭ್ರಮಪಡುತ್ತಾರೆ. ನಾವು ಪಟಾಕಿಗಳನ್ನು ಹೊಡೆದು ಪರಿಸರವನ್ನು ನಾಶ ಮಾಡುವುದಿಲ್ಲ ನಮ್ಮ ಸಂಪ್ರದಾಯ ಸಂಸ್ಕೃತಿ ಪಾಲನೆಯನ್ನು ಮಾಡಿಕೊಂಡು ಬರುತ್ತೇವೆ ಎಂದು ತಾಂಡಾದ ಮುಖ್ಯಸ್ಥ ಎಚ್.ರಾಠೋಡ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.