ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಮೇಕೆ ಮರಿಯೊಂದು ಹಾಲು ಕೊಡುವ ಮೂಲಕ ಪಶುವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ.
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ. ಮೇ 10 ರಂದು ಜನಿಸಿರುವ ಮೇಕೆ ಮರಿ ಹುಟ್ಟಿದ ಮೂರನೇ ದಿನದಲ್ಲಿ ಹಾಲು ಕೊಡುತ್ತಿದೆ.
ಇಂದಿಗೂ ಒಂದು ಕಪ್ ಹಾಲು ಕೊಡುತ್ತಿದೆ. ಈ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಇಲಾಖೆ ಪ್ರಭಾರ ಡಿಡಿ ಡಾ. ಆರ್.ಎಸ್ ಪದರಾ ನೇತೃತ್ವದಲ್ಲಿ ಅಧಿಕಾರಿಗಳು ಮೇಕೆ ಮರಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಹಾಲು ಕೊಡುವುದನ್ನು ಕಂಡು ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.
ಸದ್ಯ ಮೇಕೆ ಮರಿಯ 10 ಎಂಎಂ ಹಾಲು ಸಂಗ್ರಹಿಸಿರುವ ಅಧಿಕಾರಿಗಳು ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರು ಪ್ರಯೋಗಾಲಯಕ್ಕೆ ಮೇಕೆ ಮರಿ ಹಾಲನ್ನು ಕಳುಹಿಸಿದ್ದಾರೆ.