ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‍ಗೆ ನಾಲ್ಕನೇ ಮೇವು ಹಗರಣ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಜೊತೆಗೆ 30 ಲಕ್ಷ ರೂ. ದಂಡ ವಿಧಿಸಲಾಗಿದೆ.
ದುಮ್ಕಾ ಮೇವು ಹಗರಣ ಪ್ರಕರಣದಲ್ಲಿ ಲಾಲು ಹಾಗೂ ಇನ್ನಿತರೆ 19 ಮಂದಿ ಮೇಲಿದ್ದ ಆರೋಪ ಸಾಬೀತಾಗಿದ್ದು, ಜಾರ್ಖಂಡ್‍ನ ರಾಂಚಿಯ ವಿಶೇಷ ಸಿಬಿಐ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಲಾಲು ಮುಖ್ಯಮಂತ್ರಿಯಾಗಿದ್ದಾಗ ಬಿಹಾರದಲ್ಲಿದ್ದ, ಸದ್ಯ ಜಾರ್ಖಂಡ್‍ನಲ್ಲಿರುವ ದುಮ್ಕಾ ಖಜಾನೆಯಿಂದ ಅಕ್ರಮವಾಗಿ 3.13 ಕೋಟಿ ರೂ. ಹಣ ಪಡೆದುಕೊಂಡ ಆರೋಪ ಇವರ ಮೇಲಿತ್ತು.
Advertisement
Court has awarded sentence of 7 yrs under Section 125 & 7 years under section 38, 39 & 40 of the Unlawful Activities (Prevention) Act (UAPA), also imposed a fine of Rs 25,000 on accused: Arjun, Public prosecutor after NIA court sentenced ISIS recruiter YM Zahid to 7 yrs in prison pic.twitter.com/zZl0gdjHSt
— ANI (@ANI) March 24, 2018
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯಾಗಿದ್ದ ಜಗನ್ನಾತ್ ಮಿಶ್ರಾ ಅವರನ್ನ ನಿರಪರಾಧಿ ಎಂದು ಕೋರ್ಟ್ ಹೇಳಿದ್ದರಿಂದ ಲಾಲು ಪರ ವಕೀಲರು ಲಾಲು ಪ್ರಸಾದ್ ಯಾದವ್‍ಗೂ ರಿಲೀಫ್ ಸಿಗಬಹುದು ಎಂಬ ಭರವಸೆ ಹೊಂದಿದ್ದರು.
Advertisement
ಇತರೆ ಪ್ರಕರಣಗಳಲ್ಲಿ ಲಾಲುಗೆ 5 ಹಾಗೂ ಮೂರುವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಶಿಕ್ಷೆಗಳು ಪ್ರತ್ಯೇಕವಾಗಿರಲಿದ್ದು, ಒಂದುಗೂಡಿಸುವುದಿಲ್ಲ ಎಂದು ವರದಿಯಾಗಿದೆ.
Advertisement
ಮೊದಲನೇ ಪ್ರಕರಣದಲ್ಲಿ ಲಾಲು ಗೆ 5ವರ್ಷ ಜೈಲು ಶಿಕ್ಷೆಯಾಗಿತ್ತು. ಎರಡನೇ ಪ್ರಕರಣದಲ್ಲಿ 3.5 ವರ್ಷ ಹಾಗೂ ಮೂರನೇ ಪ್ರಕರಣದಲ್ಲಿ ಮತ್ತೆ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಲಾಲು ರಾಂಚಿಯ ಬಿಸ್ರಾ ಮೂಮಡಾ ಜೈಲಿನಲ್ಲಿದ್ದಾರೆ.
Imprisonment of 7 years each has been given under IPC & Prevention of Corruption Act, both to run concurrently. Total fine will be Rs. 60 lakh. Sentence of previous case to also run concurrently: Prabhat Kumar, Lalu Yadav's lawyer on sentence in Dumka treasury case #FodderScam pic.twitter.com/r1d7r4PMwU
— ANI (@ANI) March 24, 2018
ಏನಿದು ಪ್ರಕರಣ?: 20 ವರ್ಷಗಳ ಹಿಂದೆ ಬಿಹಾರದಲ್ಲಿ ಪಶುಗಳಿಗೆ ಮೇವು ಹಾಗೂ ಔಷಧಿ ಪೂರೈಸುವುದಾಗಿ ಚಾಯ್ಬಾಸ ಜಿಲ್ಲೆಯ ಸರ್ಕಾರಿ ಖಜಾನೆಯಿಂದ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ.
We will challenge it in HC. We Will decide further strategy on basis of overall judgement in all 4 cases. I am sure there is threat to Lalu Ji's life, looking at the conspiracy being planned by BJP: Tejashwi Yadav on Lalu Yadav sentenced to 7 yrs in prison in Dumka treasury case pic.twitter.com/dlyFWGUuYv
— ANI (@ANI) March 24, 2018