ರಾಂಚಿ: 13 ವರ್ಷಗಳ ಹಿಂದಿನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್‌ಗೆ ಜಾರ್ಖಂಡ್‌ನ ಪಲಾಮು ವಿಶೇಷ ನ್ಯಾಯಾಲಯ ಬುಧವಾರ 6,000 ರೂಪಾಯಿ ದಂಡ ವಿಧಿಸಿದೆ.
2009ರಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್‌ರನ್ನು ಸಂಸದ ಮತ್ತು ಶಾಸಕರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಲಾಲೂ ಪ್ರಸಾದ್ ಯಾದವ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ 6,000 ರೂ. ದಂಡ ವಿಧಿಸುವ ಮೂಲಕ ಪ್ರಕರಣ ಇತ್ಯರ್ಥಗೊಂಡಿದ್ದು, ಅವರು ಈಗ ಆರೋಪ ಮುಕ್ತರಾಗಿದ್ದಾರೆ ಎಂದು ಲಾಲೂ ಅವರ ವಕೀಲ ಧೀರೇಂದ್ರ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ
Advertisement
Advertisement
ಕಳೆದ ತಿಂಗಳು, ಕೇಂದ್ರೀಯ ತನಿಖಾ ದಳ (ಸಿಬಿಐ) ಲಾಲೂ ಯಾದವ್ ಅವರ ಪತ್ನಿ, ಪುತ್ರಿಯರು ಮತ್ತು ಇದಕ್ಕೆ ಸಂಬಂಧಿಸಿದ ಇತರರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿತ್ತು. ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಎಂಬ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ದೆಹಲಿ ಮತ್ತು ಬಿಹಾರದಲ್ಲಿ ಲಾಲೂ ಯಾದವ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಒಟ್ಟು 17 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಯಾದವ್ 2004 ರಿಂದ 2009 ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ.
Advertisement
ಕಿಡ್ನಿ ಕಸಿ ಮಾಡಿಸಿಕೊಳ್ಳಲು ವಿದೇಶಕ್ಕೆ ತೆರಳಬೇಕಾಗಿರುವುದರಿಂದ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಬಿಡುಗಡೆ ಮಾಡುವಂತೆ ಕೋರಿ ಲಾಲೂ ಯಾದವ್ ರಾಂಚಿಯ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಬಿಜೆಪಿಯಲ್ಲಿ 75 ವರ್ಷಕ್ಕೆ ಮನೆಗೆ ಕಳಿಸ್ತಾರೆ, ಕಾಂಗ್ರೆಸ್‌ನಲ್ಲಿ 90 ಆದ್ರೂ ಚುನಾವಣೆಗೆ ನಿಲ್ಲಿಸ್ತಾರೆ: ಕತ್ತಿ
Advertisement
ಲಾಲೂ ಯಾದವ್ ಅವರು ಕಿಡ್ನಿ ಕಸಿಗಾಗಿ ಸಿಂಗಾಪುರಕ್ಕೆ ಹೋಗುವ ಸಾಧ್ಯತೆ ಇದೆ. ಈ ಮಧ್ಯೆ ಪಾಸ್‌ಪೋರ್ಟ್ ನವೀಕರಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ನವೀಕರಿಸಿದ ಪಾಸ್‌ಪೋರ್ಟ್ ಅನ್ನು ಮತ್ತೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಯಾದವ್ ಪರ ಮತ್ತೊಬ್ಬ ವಕೀಲ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.