ಪಟ್ನಾ: ರಾಂಚಿಯ ಹೈಕೋರ್ಟ್ ಮೇವು ಹಗರಣದ ಅಪರಾಧಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಆರೋಗ್ಯ ಚಿಕಿತ್ಸೆಗಾಗಿ ಆರು ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.
ಲಾಲು ಪ್ರಸಾದ್ ಪುತ್ರನ ತೇಜ್ ಪ್ರತಾಪ್ ಯಾದವ್ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಶುಕ್ರವಾರ ಪಟ್ನಾಗೆ ಆಗಮಿಸಿದ್ದರು. ಈ ವೇಳೆಯೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಶನಿವಾರ ತೇಜ್ ಪ್ರತಾಪ್ ವಿವಾಹ ಸಮಾರಂಭ ನಡೆಯಲಿದೆ.
Advertisement
Advertisement
ಇದಕ್ಕೂ ಮುನ್ನವೇ ಲಾಲು ಪ್ರಸಾದ್ ಯಾದವ್ ಪುತ್ರನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಮೂರು ದಿನಗಳ ಪೆರೋಲ್ ಪಡೆದಿದ್ದರು. ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯಾ ವಿವಾದ ನಿಶ್ಚಿತಾರ್ಥ ಸಮಾರಂಭವೂ ಏಪ್ರಿಲ್ 18 ರಂದು ಪಟ್ನಾದ ಮಯೂರ ಹೋಟೆಲ್ ನಲ್ಲಿ ನೆರವೇರಿತ್ತು. ಮೇ 12 ರಂದು ವಿವಾಹ ಸಮಾರಂಭ ನಡೆಯಲಿದೆ.
Advertisement
ಪ್ರತಾಪ್ ನಿಶ್ಚಿತಾರ್ಥ ಸಮಾರಂಭದ ವೇಳೆ ಲಾಲು ಪ್ರಸಾದ್ ಯಾದವ್ ಜೈಲಿನಲ್ಲಿ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಈ ವೇಳೆ ಪ್ರತಾಪ್ ತಮ್ಮ ನೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡು `ಮೀಸ್ ಯೂ ಪಾ’ ಎಂದು ಬರೆದುಕೊಂಡಿದ್ದರು.
Advertisement
ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ ಯಾದವ್ ಅನಾರೋಗ್ಯ ಸಮಸ್ಯೆಯಿಂದ ಜಾರ್ಖಂಡ್ ನ ಆರ್ ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ