ಲಲಿತ್ ಮೋದಿ ಮತ್ತು ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಸ್ವತಃ ಲಲಿತ್ ಮೋದಿ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಾಗ ಎಲ್ಲರೂ ಅಚ್ಚರಿ ಆಗಿದ್ದಂತೂ ನಿಜ. ಅದರಲ್ಲೂ ಮಾಜಿ ವಿಶ್ವಸುಂದರಿಯ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದಾಗಲಂತೂ ಅದೇ ನ್ಯಾಷನಲ್ ನ್ಯೂಸ್ ಆಯಿತು. ಆನಂತರ ಏನೆಲ್ಲ ಬೆಳವಣಿಗೆಗಳು ನಡೆದವು.
ತಾವಿಬ್ಬರೂ ಡೇಟಿಂಗ್ ಮಾಡುತ್ತಿಲ್ಲ ಎನ್ನುವಂತೆ ಸುಷ್ಮಿತಾ ಸೇನ್ ಬರೆದುಕೊಂಡರು. ತಾವಿಬ್ಬರೂ ಸ್ನೇಹಿತರು ಎನ್ನುವ ಅರ್ಥದಲ್ಲೂ ಬಿಂಬಿಸಲು ಹೊರಟರು. ಆದರೆ, ಲಲಿತ್ ಮೋದಿ ಮಾತ್ರ, ತಮ್ಮಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವುದನ್ನು ಪದೇ ಪದೇ ಸಾಬೀತು ಮಾಡಲು ಹೊರಟರು. ಹಾಗಾಗಿ ಸುಷ್ಮಿತಾ ಸೇನ್ ಬಗ್ಗೆ ಸಲ್ಲದ ಆರೋಪಗಳನ್ನೂ ಕೆಲವರು ಮಾಡಿದರು. ದುಡ್ಡಿನ ಹಿಂದೆ ಬಿದ್ದವಳು ಎಂದು ಸ್ವತಃ ಮಾಜಿ ಬಾಯ್ ಫ್ರೆಂಡ್ ಹೇಳಿಕೆ ಕೊಟ್ಟ.
ನಿತ್ಯ ಟ್ರೋಲ್ ಆಗುವುದನ್ನು ತಪ್ಪಿಸಲು ಸುಷ್ಮಿತಾ ಸೇನ್ ಇಟಲಿ ಪ್ರವಾಸ ಕೈಗೊಂಡರು. ಈ ಪ್ರವಾಸದ ಕೆಲವು ಫೊಟೋ ಮತ್ತು ವಿಡಿಯೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅದರಲ್ಲೂ ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರುವಂತಹ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಸಖಯ್ ವೈರಲ್ ಕೂಡ ಆಗಿದೆ. ಸಖತ್ ಸೆಕ್ಸಿಯಾಗಿಯೂ ಸುಷ್ಮಿತಾ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ
ಈ ವಿಡಿಯೋವನ್ನು ಸುಷ್ಮಿತಾ ಸೇನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆಯೆ ಲಲಿತ್ ಮೋದಿ ಅದಕ್ಕೆ ಕಾಮೆಂಟ್ ಮಾಡಿದ್ದಾರೆ. ಲುಕ್ಕಿಂಗ್ ಹಾಟ್ ಎಂದು ಬರೆದಿದ್ದಾರೆ. ಈ ಬರಹ ಕೂಡ ಇದೀಗ ಚರ್ಚೆಗೆ ಕಾರಣವಾಗಿದೆ. ಸುಷ್ಮಿತಾ ಸೇನ್ ಜೊತೆ ಇವರಿಗಿದ್ದ ಪ್ರೇಮವನ್ನು ಈ ರೀತಿಯಲ್ಲಿ ಸಾರಲಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.