ಐಜ್ವಾಲ್: ಮಿಜೋರಾಂ (Mizoram) ಮುಖ್ಯಮಂತ್ರಿಯಾಗಿ ಝೊರಾಂ ಪೀಪಲ್ಸ್ ಮೂವ್‍ಮೆಂಟ್ (ZPM) ಪಕ್ಷದ ಲಾಲ್ದುಹೋಮ ಅವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಲಾಲ್ದುಹೋಮಾ (Lalduhoma) ಅವರಿಗೆ ರಾಜ್ಯಪಾಲರಾದ ಹರಿ ಬಾಬು ಕಂಬಂಪತಿ (Governor Hari Babu Kambhampati) ಅರು ಪ್ರಮಾಣವಚನ ಬೋಧನೆ ಮಾಡಿದ್ದಾರೆ. ಲಾಲ್ದುಹೋಮಾ ಜೊತೆಗೆ ಪಕ್ಷದ 11 ಮಂದಿ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮಿಜೋ ನ್ಯಾಷನಲ್ ಫ್ರಂಟ್ ನಾಯಕ ಮತ್ತು ನಿರ್ಗಮಿತ ಮುಖ್ಯಮಂತ್ರಿ ಝೋರಂತಂಗ ಅವರು ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸಿದ್ದರು. ಶಾಸಕಾಂಗ ಪಕ್ಷದ ನಾಯಕ ಲಾಲಛಂದಮ ರಾಲ್ಟೆ ಸೇರಿದಂತೆ ಎಲ್ಲಾ ಎಂಎನ್‌ಎಫ್ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement
Advertisement
ಮಂಗಳವಾರ ಝೋರಾಮ್ ಪೀಪಲ್ಸ್ ಮೂವ್ಮೆಂಟ್ ಶಾಸಕಾಂಗ ಪಕ್ಷದ ನಾಯಕರಾಗಿ ಲಾಲ್ದುಹೋಮ ಹಾಗೂ ಉಪನಾಯಕರಾಗಿ ಕೆ.ಸಪ್ದಂಗ ಅವರನ್ನು ಆಯ್ಕೆ ಮಾಡಲಾಯಿತು. 40 ಸದಸ್ಯರ ವಿಧಾನಸಭೆಯೊಂದಿಗೆ, ಮಿಜೋರಾಂ ಮುಖ್ಯಮಂತ್ರಿ ಸೇರಿದಂತೆ 12 ಮಂತ್ರಿಗಳನ್ನು ಹೊಂದಬಹುದಾಗಿದೆ.
Advertisement
ನವೆಂಬರ್ 7 ರಂದು ಒಂದೇ ಹಂತದಲ್ಲಿ ಮಿಜೋರಾಂ ಚುನಾವಣೆ ನಡೆಸಲಾಯಿತು. ರಾಜ್ಯದಲ್ಲಿ ಶೇ.80.66ರಷ್ಟು ಮತದಾನವಾಗಿತ್ತು. ಝೋರಾಮ್ ಪೀಪಲ್ಸ್ ಮೂವ್ಮೆಂಟ್ 40 ರಲ್ಲಿ 27 ಸ್ಥಾನಗಳನ್ನು ಗೆದ್ದು ಪ್ರಚಂಡ ಗೆಲುವು ಸಾಧಿಸಿದೆ. ZPM ಅನ್ನು 2019 ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲಾಗಿದೆ ಇದಕ್ಕೂ ಮುನ್ನ 2018 ರ ಚುನಾವಣೆಯಲ್ಲಿ 8 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇದನ್ನೂ ಓದಿ: Mizoram Election Results: ʻಕೈʼ ಹಿಡಿಯದ ಮಿಜೋರಾಂ – ZPMಗೆ ಗೆಲುವು, 2 ಕ್ಷೇತ್ರಗಳಲ್ಲಿ ಅರಳಿದ ಕಮಲ