ಬೆಂಗಳೂರು: ಕೊರೋನಾ ವೈರಸ್ ಬಂದ್ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರದ ತನಕ ಪಾರ್ಕ್ ಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಆದರೆ ಬೆಂಗಳೂರಿನ ಹೆಸರಾಂತ ಲಾಲ್‍ಬಾಗ್ ಉದ್ಯಾನವನದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್ ಬಿದ್ದಿಲ್ಲ.
ಸರ್ಕಾರ, ಪಾರ್ಕ್ ಗಳನ್ನ ಒಂದು ವಾರದ ತನಕ ಬಂದ್ ಮಾಡುವಂತೆ ಆದೇಶ ನೀಡಿದೆ. ಆದರೂ ಸರ್ಕಾರ ನೀಡಿದ ಆದೇಶಕ್ಕೆ ಲಾಲ್‍ಬಾಗ್ ತೋಟಗಾರಿಕಾ ಆಡಳಿತ ಮಂಡಳಿ ಡೋಂಟ್ ಕೇರ್ ಎಂದಿದೆ.
Advertisement
Advertisement
ಬೆಳ್ಳಂಬೆಳಗ್ಗೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ವಾಕಿಂಗ್, ಜಾಗಿಂಗ್ ಬಂದಿದ್ದರು. ಬಂದಿದ್ದ ಬಹುತೇಕ ಜನರು ಮಾಸ್ಕ್ ಧರಿಸದೆ ಪಾರ್ಕಿಗೆ ಎಂಟ್ರಿ ಕೊಟ್ಟಿದ್ದರು. ಪಾರ್ಕ್ ಗಳನ್ನು ಬಂದ್ ಮಾಡುವ ಸರ್ಕಾರದ ಆದೇಶವನ್ನ ಬಹುತೇಕ ಜನರು ಸ್ವಾಗತಿಸಿದ್ದರೆ, ಕೆಲವರು ಒಂದು ವಾರದ ತನಕ ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.
Advertisement
ಕೊರೊನಾ ವೈರಸ್‍ಗೆ ಕರ್ನಾಟಕದಲ್ಲಿ ವೃದ್ಧನೊಬ್ಬ ಮೃತಪಟ್ಟಿದ್ದಾರೆ. ಹೀಗಾಗಿ ಮುಂಜಾಗ್ರತವಾಗಿ ಸಿಎಂ ಯಡಿಯೂರಪ್ಪ ಅವರು ಒಂದು ವಾರ ಕರ್ನಾಟಕ ಬಂದ್ ಮಾಡಿದ್ದಾರೆ. ಶಾಲೆ, ಕಾಲೇಜುಗಳಿಗೆ ರಜೆ ಫೋಷಣೆ ಮಾಡಿದ್ದಾರೆ. ಅಲ್ಲದೇ ಮಾಲ್, ಥಿಯೇಟರ್, ಮದುವೆ, ಪಬ್, ಪಾರ್ಟಿ, ಸಮಾರಂಭ ಇತ್ಯಾದಿಗಳನ್ನು ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ.
Advertisement