ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಜೇನುಹುಳುಗಳ ಹಾವಳಿ ಹೆಚ್ಚಾಗಿದ್ದು ಪರ್ಫ್ಯೂಮ್ ಹಾಕಿಕೊಂಡು ಹೋಗಬೇಡಿ. ಕಪ್ಪು ಬಟ್ಟೆ ಅಂತೂ ಮೊದ್ಲೇ ಬೇಡ. ಏಕೆಂದರೆ ಅಂತವರನ್ನು ಜೇನುಹುಳುಗಳು ಹುಡುಕಿ ಹುಡುಕಿ ಕಚ್ಚುತ್ತಿವೆ.
2016ನೇ ರಲ್ಲಿ ಈ ರೀತಿಯಾಗಿ ಜೇನುಹುಳುಗಳ ಕಿರಿಕ್ ನಡೆದಿತ್ತು. ಮಾರ್ಚ್, ಏಪ್ರಿಲ್ ನಲ್ಲಿ ಲಾಲ್‍ಬಾಗ್ ನಲ್ಲಿ ಜೇನು ಹುಳಗಳು ಹೆಚ್ಚಾಗಿ ಗೂಡು ಕಟ್ಟುತ್ತದೆ. ಈಗ ಲಾಲ್ ಬಾಗ್ ನ ಐದು ಕಡೆ ಜೇನುಹುಳಗಳು ದೊಡ್ಡ ಗೂಡು ಕಟ್ಟಿದ್ದು ಅಧಿಕಾರಿಗಳು ಮರದ ಹತ್ತಿರ ಗ್ರಿಲ್ ಹಾಕಿದ್ದಾರೆ.
Advertisement
Advertisement
ಈಗಾಗಲೇ ಒಂದೇ ತಿಂಗಳಲ್ಲಿ ಐದು ಜನ ಬುರ್ಖಾ ಹಾಕಿಕೊಂಡು ಬಂದ ಮಹಿಳೆಯರಿಗೆ ಜೇನುಹುಳುಗಳು ಕಚ್ಚಿದೆ. ಪರ್ಫ್ಯೂಮ್ ಸ್ಮೆಲ್ ಮತ್ತು ಕಪ್ಪು ಬಟ್ಟೆ ಕಂಡರೆ ಜೇನುಗಳಿಗೆ ಆಗುವುದಿಲ್ಲ. ಇದರಿದಾಗಿ ಹೆಚ್ಚಾಗಿ ಅವರ ಮೇಲೆ ದಾಳಿ ನಡೆಸುತ್ತಿದೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.
Advertisement
ಜೇನು ಹುಳುಗಳ ದಾಳಿಯಿಂದ ಎಚ್ಚೆತ್ತ ತೋಟಾಗಾರಿಕಾ ಇಲಾಖೆಯ ಸಿಬ್ಬಂದಿ, ಕಪ್ಪು ಬಟ್ಟೆ, ಪರ್ಫ್ಯೂಮ್ ಹಾಕಿಕೊಂಡು ಬಂದವರನ್ನು ದೂರ ಕಳುಹಿಸುತ್ತಿದ್ದಾರೆ. ಲಾಲ್‍ಬಾಗ್ ಹೊರಗಡೆಯಿಂದ ವಿಹಾರಿಗಳಿಗೆ ಎಚ್ಚರಿಕೆ ಕೊಟ್ಟು ಕಳುಹಿಸುತ್ತಿದ್ದೇವೆ ಎಂದು ತೋಟಗಾರಿಕಾ ಇಲಾಖೆಯ ಜಂಟಿ ಆಯುಕ್ತ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement