ಬೆಂಗಳೂರು: ಬಹುನೀರಿಕ್ಷಿತ 208 ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಈ ಹೂಮೇಳ ನೋಡಲು ಜನರು ಸಾಗರದಂತೆ ಹರಿದು ಬಂದಿದ್ದು, ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಜನರು ಭೇಟಿ ನೀಡಿದ್ದಾರೆ.
ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ನಡೆಯುತ್ತಿರುವ 208ನೇ ಫ್ಲವರ್ ಶೋ ಎಲ್ಲರ ಮನಸೂರೆಗೊಳಿಸಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ಸೂಚಿಸುವ ಯೋಜನೆ ಜನಮೆಚ್ಚುಗೆಗೆ ಪಾತ್ರವಾಗಿದೆ. ಯುದ್ಧ ವಾಹನಗಳು, ಹಿಮಾಲಯದ ಬೆಟ್ಟ ಗುಡ್ಡಗಳು, ಸಿಯಾಚಿನ್‍ನ ಹಿಮ, ಟ್ಯಾಂಕರ್, ನೌಕಾದಳದ ಹಡಗನ್ನು ಹೂವಿನ ಮಾದರಿಯಲ್ಲಿ ರಚಿಸಲಾಗಿದ್ದು, ಜನ ಆಸಕ್ತಿಯಿಂದ ಆಗಮಿಸಿ ಕಣ್ತುಂಬಿಕೊಂಡಿದ್ದಾರೆ.
Advertisement
Advertisement
ಲಾಲ್‍ಬಾಗ್ ಹೂಮೇಳದಿಂದಾಗಿ ಸಿಂಗಾರಗೊಂಡ ನವ ವಧುವಿನಂತೆ ಕಂಗೊಳಿಸುತ್ತಿತ್ತು. ಶನಿವಾರ ಮೊದಲ ದಿನವಾದ್ದರಿಂದ ಫ್ಲವರ್ ಶೋಗೆ 15 ಸಾವಿರ ಜನ ಭೇಟಿ ನೀಡಿದ್ದರು. ಭಾನುವಾರ ಆಗಿದ್ದರಿಂದ ಹೆಚ್ಚು ಜನ ಬರುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಭೇಟಿ ಕೊಟ್ಟಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನ ಲಾಲ್‍ಬಾಗ್‍ಗೆ ಭೇಟಿ ಕೊಟ್ಟಿದ್ದಾರೆ ಎಂದು ಪ್ರವಾಸಿ ಆರತಿ ಹೇಳಿದ್ದಾರೆ.
Advertisement
Advertisement
ಗಾಜಿನ ಮನೆ ಪ್ರವೇಶ ಮಾಡುತ್ತಿದ್ದಂತೆಯೇ ನವದೆಹಲಿಯಲ್ಲಿರುವ ಸ್ಮಾರಕ ಅಮರ್ ಜವಾನ್ ಜ್ಯೋತಿಯ ಮಾದರಿಯನ್ನ ನಿರ್ಮಿಸಲಾಗಿದೆ. ಫಲಪುಷ್ಪಗಳ ಜೊತೆ ಸೈನಿಕರ ತ್ಯಾಗ ಬಲಿದಾನ ಕುರಿತು ಮೂಡಿಸುವ ಜಾಗೃತಿಗೆ ಸಾರ್ವಜನಿಕರು ಭೇಷ್ ಅನ್ನುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬಿರುವ ರೀಲ್ ಚಿತ್ರವೂ ಕೂಡ ಗಾಜಿನ ಮನೆಯಲ್ಲಿ ಗಮನ ಸೆಳೆಯುತ್ತಿದೆ. ಈ ಫಲಪುಷ್ಪ ಪ್ರದರ್ಶನದ ಸೊಬಗು ಆಗಸ್ಟ್ 15 ರವರೆಗೆ ಆಯೋಜನೆಗೊಂಡಿರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews