ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ (Lal Singh Chadha) ಸಿನಿಮಾಗೆ ಚಿತ್ರಮಂದಿರಗಳಲ್ಲಿ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಸೇರಿದಂತೆ ಅನೇಕ ತೊಂದರೆಗಳಿಂದಾಗಿ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ, ಒಟಿಟಿಯಲ್ಲಿ ಮಾತ್ರ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಒಟಿಟಿಯಲ್ಲಿ (OTT) ನೋಡಿದವರು, ಥಿಯೇಟರ್ ನಲ್ಲಿ ಈ ಸಿನಿಮಾ ಯಾಕೆ ಓಡಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಲಾಲ್ ಸಿಂಗ್ ಚಡ್ಡಾ ಇದೀಗ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದ್ದು, ಜಗತ್ತಿನ ಇಂಗ್ಲಿಷೇತರ ಸಿನಿಮಾಗಳ ಪಟ್ಟಿಯಲ್ಲಿ ಅದಕ್ಕೆ 2ನೇ ಸ್ಥಾನ ಸಿಕ್ಕಿದೆ. ಅಲ್ಲದೇ, ಭಾರತೀಯ ಪಟ್ಟಿಯಲ್ಲಿ ಇದು ಮೊದಲ ಸ್ಥಾನವನ್ನು (No.1) ತನ್ನದಾಗಿಸಿಕೊಂಡಿದೆ. 6.63 ದಶಲಕ್ಷ ಸ್ಟ್ರೀಮ್ ಆಗುವ ಮೂಲಕ ಹೊಸ ದಾಖಲೆಯನ್ನು ಈ ಸಿನಿಮಾ ಬರೆದಿದೆ. ಹಾಗಾಗಿ ಸಹಜವಾಗಿಯೇ ಅಮೀರ್ ಖಾನ್ (Aamir Khan) ಸಂತಸ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ
Advertisement
Advertisement
ಥಿಯೇಟರ್ (Theatre) ನಲ್ಲಿ ಬಿಡುಗಡೆಯಾದಾಗ ಪ್ರೇಕ್ಷಕ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ ಕೇವಲ 88 ಕೋಟಿ ಗಳಿಸುವಲ್ಲಿ ಚಿತ್ರ ಸಫಲವಾಯಿತು. ಅಮೀರ್ ಸಿನಿಮಾವನ್ನು ಬಹಿಷ್ಕರಿಸಿ ಎನ್ನುವ ಟ್ರೆಂಡ್ ನಿಂದಾಗಿ ಚಿತ್ರ ಅಂದುಕೊಂಡಷ್ಟು ದುಡ್ಡು ಮಾಡಲಿಲ್ಲ. ಆದರೆ, ಒಟಿಟಿಯಲ್ಲಿ ಮಾತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಜನರು ಈ ಸಿನಿಮಾವನ್ನು ದಾಖಲೆಯ ರೀತಿಯಲ್ಲೇ ನೋಡಿದ್ದಾರೆ.
Advertisement
ಇದೊಂದು ರೀಮೇಕ್ ಸಿನಿಮಾವಾಗಿದ್ದು, ಹಾಲಿವುಡ್ ನ ಫಾರೆಸ್ಟ್ ಗಂಪ್ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಿದ್ದರು ಅಮೀರ್ ಖಾನ್. ಫಾರೆಸ್ಟ್ ಗಂಪ್ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಕೂಡ ಬಂದಿದೆ. ಈ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಈ ಚಿತ್ರವನ್ನು ಅಮೀರ್ ನಿರ್ಮಾಣ ಮಾಡಿದ್ದರು. ಆಗಸ್ಟ್ 11 ರಂದು ಈ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿತ್ತು.