BollywoodCinemaLatestMain Post

ಲಾಲ್ ಸಿಂಗ್ ಚಡ್ಡಾ: ಸ್ಪೆಷಲ್ ಮನವಿ ಮಾಡಿದ ಕರೀನಾ ಕಪೂರ್

ಮೀರ್ ಖಾನ್ ಮತ್ತು ಕರೀನಾ ಕಪೂರ್ ಕಾಂಬಿನೇಷನ್ ನ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಿ ಮೂರ್ನಾಲ್ಕು ದಿನಗಳು ಕಳೆದಿವೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಬಾಯ್ಕಾಟ್ ಬಿಸಿ ಎದುರಿಸಿತ್ತು. ಸೋಷಿಯಲ್ ಮೀಡಿಯಾದಲ್ಲಿ ಬಾಯ್ಕಾಟ್ ಟ್ರೆಂಡ್ ವೈರಲ್ ಆಗಿದ್ದರಿಂದ ಚಿತ್ರ ರಿಲೀಸ್ ಆದ ನಂತರವೂ ಸಾವಿರಾರು ಸ್ಕ್ರೀನ್ ಗಳಲ್ಲಿ ಪ್ರದರ್ಶನ ರದ್ದು ಮಾಡಲಾಗಿತ್ತು. ಆಮೀರ್ ಖಾನ್ ವೃತ್ತಿ ಜೀವನದ ಅತ್ಯಂತ ಕಳೆ ಪ್ರದರ್ಶನ ಕಂಡ ಸಿನಿಮಾ ಇದಾಗಿದೆ ಎನ್ನಲಾಗುತ್ತಿದೆ.

ಬಾಯ್ಕಾಟ್ ಕೂಗು ಜೋರಾಗುತ್ತಿದ್ದಂತೆಯೇ ಸ್ವತಃ ಆಮೀರ್ ಖಾನ್ ಅಖಾಡಕ್ಕೆ ಇಳಿದರು. ಬಾಯ್ಕಾಟಿಗೆ ಕಾರಣವಾಗಿದ್ದ ವಿಷಯದ ಕುರಿತು ಮಾತನಾಡಿ, ಕ್ಷಮೆ ಕೂಡ ಕೇಳಿದರು. ತಮಗೆ ದೇಶದ ಮೇಲೆ ಅಪಾರ ಗೌರವವಿದೆ ಎಂದು ಹೇಳಿದರು. ಆಮೀರ್ ಏನೇ ಹೇಳಿದರೂ, ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಹಿಂದೂಪರ ಕಾರ್ಯಕರ್ತರು ಘೋಷಿಸಿ ಆಗಿತ್ತು. ಅದರಿಂದ ಸಿನಿಮಾಗೆ ತೊಂದರೆಯ ಆಯಿತು.

ಇದೀಗ ಈ ಕುರಿತಂತೆ ಕರೀನಾ ಕಪೂರ್ ಅಭಿಮಾನಿಗಳಿಗೆ ಮತ್ತು ಹಿಂದೂಪರ ಕಾರ್ಯಕರ್ತರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಸಿನಿಮಾ ಬಾಯ್ಕಾಟ್ ಮಾಡುವುದರಿಂದ ಹಲವರಿಗೆ ತೊಂದರೆ ಆಗಲಿದೆ. 250ಕ್ಕೂ ಹೆಚ್ಚು ಜನರು ಈ ಸಿನಿಮಾಗಾಗಿ ಕೆಲಸ ಮಾಡಿದ್ದೇವೆ. ಬರೋಬ್ಬರಿ ಎರಡು ವರ್ಷಗಳ ಕಾಲ ಶ್ರಮ ಹಾಕಿದ್ದೇವೆ. ಈ ಕಾರಣಕ್ಕಾಗಿ ಬಾಯ್ಕಾಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

ಒಂದು ಕಡೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಬೆಂಕಿಗೆ ಇಂಚಿಂಚು ಸುಡುತ್ತಿದ್ದರೆ, ಇತ್ತ ಕಡೆ ಇದೇ ಕಾರಣಕ್ಕಾಗಿ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಾಗಿಕೆ. ಈಗಾಗಿ ಎರಡೂ ಸಿನಿಮಾಗಳ ಬಾಕ್ಸ್ ಆಫೀಸ್ ರಿಪೋರ್ಟ್ ಅಷ್ಟಕಷ್ಟೇ ಇದೆ. ರಕ್ಷಾ ಬಂಧನಕ್ಕಿಂತಲೂ ಲಾಲ್ ಸಿಂಗ್ ಚಡ್ಡಾ ಕಲೆಕ್ಷನ್ ಓಕೆ ಎನ್ನುವಂತಿದೆ.

Live Tv

Leave a Reply

Your email address will not be published. Required fields are marked *

Back to top button