ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲೇ ಅತೀ ಹೆಚ್ಚು ಇನ್ಸ್ಪೈರ್ ಮಾಡುವಂತಹ ಚಿತ್ರ ಮಾಡಿದ್ದು ಬಾಲಿವುಡ್ ನಟ ಅಮೀರ್ ಖಾನ್. ಒಂದೊಂದು ಸಿನಿಮಾ ಕೂಡ ಒಂದೊಂದು ಮೋಟಿವೇಟ್ ಪುಸ್ತಕದ ಹಾಗೆ ಇರುತ್ತವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಲಾಲ್ ಸಿಂಗ್ ಛಡ್ಡಾ’. ನಿನ್ನೆಯಷ್ಟೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಕಂಡು ಭಾರತಕ್ಕೆ ಭಾರತವೇ ಉಘೇ ಎಂದಿದೆ. ಇಂತಹ ಸಿನಿಮಾಗಳನ್ನು ಮಾಡಲು ನಿಮ್ಮಿಂದ ಮಾತ್ರ ಸಾಧ್ಯ ಎಂದು ಕೊಂಡಾಡುತ್ತಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ
Advertisement
ಪಾತ್ರದಲ್ಲಿ ಪರಕಾಯ ಪ್ರವೇಶ, ಪಾತ್ರವೇ ತಾವಾಗುವ ಕಲೆಯು ಅಮೀರ್ ಅವರಿಗೆ ಕರಗತವಾಗಿದೆ. ಹಾಗಾಗಿ ಪಾತ್ರಕ್ಕಾಗಿ ಅವರು ಸರ್ವ ರೀತಿಯಲ್ಲೂ ತಯಾರಾಗುತ್ತಾರೆ. ಈ ವಯಸ್ಸಿನಲ್ಲೂ ಹದಿನೆಂಟರ ಯುವಕನಂತೆ ಕಾಣುವ ತಯಾರಿ ಇದೆಯಲ್ಲ, ಅದಕ್ಕೆ ಅಮೀರ್ ಖಾನ್ ಗೆ ಅಮೀರ್ ಖಾನ್ ಸಾಟಿ. ಅಷ್ಟರ ಮಟ್ಟಿಗೆ ಟ್ರೈಲರ್ ನಲ್ಲಿ ಫರೆಫೆಕ್ಟ್ ಆಗಿ ಕಂಡಿದ್ದಾರೆ ಅಮೀರ್. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ
Advertisement
Advertisement
ಹಲವು ವಿಶೇಷಗಳೊಂದಿಗೆ ಈ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕಾಗಿ ಅಮೀರ್ ಸವೆಸಿದ ದಿನಗಳು ಬರೋಬ್ಬರಿ 200 ದಿನಗಳಂತೆ. ಇದೇ ಮೊದಲ ಬಾರಿಗೆ ಅವರು ಸುಧೀರ್ಘ ಕಾಲ್ ಶೀಟ್ ಕೊಟ್ಟು, ಸಿನಿಮಾ ಮಾಡಿದ್ದಾರೆ. ಅದರಲ್ಲೂ ಭಾರತದ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಸಿನಿಮಾವನ್ನು ಶೂಟ್ ಮಾಡಿದ್ದಾರೆ. ಒಂದಲ್ಲ, ನಾಲ್ಕೈದು ಶೇಡ್ ನಲ್ಲಿ ಅಮೀರ್ ಈ ಸಿನಿಮಾದಲ್ಲಿ ಕಾಣಸಿಗುತ್ತಾರೆ. ಅಷ್ಟನ್ನೂ ಟ್ರೈಲರ್ ನಲ್ಲಿ ತೋರಿಸಿ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ
Advertisement
ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹುಡುಗನೊಬ್ಬ ಅದನ್ನು ದಾಟಿಕೊಂಡು ಸಾಧನೆ ಮಾಡುವ ಕಥೆ ಈ ಸಿನಿಮಾದಲ್ಲಿದೆ ಎಂದು ಮೇಲ್ನೋಟಕ್ಕೆ ಅನಿಸಿದರೆ, ಅಲ್ಲೊಂದು ಪ್ರೇಮ, ಸೈನಿಕ, ದೇಶಪ್ರೇಮ ಹೀಗೆ ಏನೆಲ್ಲ ಇರಬಹುದು ಎನ್ನುವ ಸಣ್ಣ ಸುಳಿವನ್ನು ಟ್ರೈಲರ್ ನಲ್ಲಿ ನೀಡಿದ್ದಾರೆ ಅಮೀರ್. ಹಾಗಾಗಿ ಈ ಟ್ರೈಲರ್ ಟ್ರೆಂಡಿಂಗ್ ನಲ್ಲಿದೆ. ಹೆಚ್ಚು ಜನಪ್ರಿಯತೆಯ ಜೊತೆಗೆ ಇಂತಹ ಸಿನಿಮಾಗಳು ಇನ್ನಷ್ಟು ಬರಲಿ ಎಂಬ ಬೇಡಿಕೆ ಕೂಡ ಹೆಚ್ಚಿಸಿದೆ.