‘ಲಾಲ್ ಸಲಾಮ್’ ನಟ ವಿಷ್ಣು ವಿಶಾಲ್ (Vishnu Vishal) ಪತ್ನಿ ಜ್ವಾಲಾ ಗುಟ್ಟಾ (Jwala Gutta) ಆ್ಯನಿವರ್ಸರಿ ದಿನವೇ ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ಮದುವೆ ವಾರ್ಷಿಕೋತ್ಸವದ ದಿನವೇ ಮುದ್ದು ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ:‘ದೂರ ತೀರ ಯಾನ’ ಚಿತ್ರದ ಮೊದಲ ಪ್ರೇಮಗೀತೆಗೆ ಅಭಿಮಾನಿಗಳ ಮೆಚ್ಚುಗೆಯ ಸುರಿಮಳೆ
ನಮಗೆ ಹೆಣ್ಣು ಮಗು ಜನಿಸಿದೆ. ನನ್ನ ಮಗ ಆರ್ಯನ್ ಈಗ ಅಣ್ಣ ಆಗಿದ್ದಾನೆ. ಇಂದು ನಮ್ಮ 4ನೇ ವಾರ್ಷಿಕೋತ್ಸವದ ಸಂಭ್ರಮ. ಇದೇ ದಿನ ನಾವು ದೇವರಿಂದ ಈ ಉಡುಗೊರೆಯನ್ನು ಸ್ವಾಗತಿಸುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನಮಗೆ ಬೇಕು ಎಂದು ನಟ ವಿಷ್ಣು ವಿಶಾಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಪೋಷಕರಾದ ಸಂಭ್ರಮದಲ್ಲಿರುವ ಈ ಜೋಡಿಗೆ ಫ್ಯಾನ್ಸ್‌ಗೆ ವಿಶ್ ಮಾಡುತ್ತಿದ್ದಾರೆ. ಇದನ್ನೂ ಓದಿ:ನಗದಿನ ಮೂಲಕ ಸಂಭಾವನೆ – ಮಹೇಶ್ ಬಾಬುಗೆ ಇಡಿ ನೋಟಿಸ್
View this post on Instagram
ಅಂದಹಾಗೆ, ನಟ ಕೆ. ನಟರಾಜ್ ಪುತ್ರಿ ರಂಜನಿ ನಟರಾಜ್ ಅವರನ್ನು ಪ್ರೀತಿಸಿ 2010ರಲ್ಲಿ ವಿಷ್ಣು ಮದುವೆಯಾದರು. ಇವರ ದಾಂಪತ್ಯಕ್ಕೆ ಮಗ ಆರ್ಯನ್ ಸಾಕ್ಷಿಯಾಗಿದ್ದಾರೆ. 2018ರಲ್ಲಿ ಕೆಲ ಮನಸ್ತಾಪಗಳಿಂದ ಈ ಜೋಡಿ ಡಿವೋರ್ಸ್ ಪಡೆದರು. ಬಳಿಕ 2022ರಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಜೊತೆ ವಿಷ್ಣು ಹೈದರಾಬಾದ್‌ನಲ್ಲಿ ಮದುವೆಯಾದರು. ಇದೀಗ ಮನೆಗೆ ಮಹಾಲಕ್ಷ್ಮಿ ಆಗಮಿಸಿದ ಖುಷಿಯಲ್ಲಿ ವಿಷ್ಣು ಕುಟುಂಬ.