ಲಕ್ಷ್ಮಿ ರಾಯ್ ‘ಝಾನ್ಸಿ’ ಮಾತಿನ ಮನೆಗೆ

Public TV
1 Min Read
JHANSI 3 copy

ಕನ್ನಡ ನಾಡಿನ ಪ್ರತಿಭೆ ಅಕ್ಕ ಪಕ್ಕ ರಾಜ್ಯಗಳಲ್ಲಿ ಜನಪ್ರಿಯತೆ ಪಡೆದ ಲಕ್ಷ್ಮಿ ರಾಯ್ ಸಾಹಸ ಪ್ರಧಾನ ಚಿತ್ರದ ಮೂಲಕ ವಾಪಸ್ಸಾಗಿರುವ `ಝಾನ್ಸಿ’ ಚಿತ್ರೀಕರಣ ಪೂರ್ಣಗೊಳಿಸಿ ಈಗ ಮಾತಿನ ಮನೆಗೆ ತೆರಳಲಿದೆ ಎಂದು ನಿರ್ದೇಶಕ ಪಿವಿಎಸ್ ಗುರುಪ್ರಸಾದ್ ತಿಳಿಸಿದ್ದಾರೆ.

‘ಝಾನ್ಸಿ’ ಆಗಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಲಕ್ಷ್ಮಿ ರಾಯ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷಿಯಲ್ ಆರ್ಟ್ ಸಹ ಕಲಿತಿದ್ದಾರೆ. ಒಂದು ಹಾಡಿಗೆ ನೃತ್ಯ ನಿರ್ದೇಶಕ ಧನ್ ಕುಮಾರ್ ಸ್ಟೆಪ್ಸ್ ಕೂಡ ಹಾಕಿಸಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಈ ಹಿಂದೆ `ಮರ್ಯಾದ ರಾಮಣ್ಣ’ ಚಿತ್ರವನ್ನು ನಿರ್ದೇಶನ ಮಾಡಿದವರು. ಈ `ಝಾನ್ಸಿ’ ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ ಸಂಭಾಷಣೆ ಸಹ ಮಾಡಿದ್ದಾರೆ.

JHANSI 1 copy

ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ `ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಎಂದು ನಿರ್ದೇಶಕ ಪಿವಿಎಸ್ ಗುರುಪ್ರಸಾದ್ ತಿಳಿಸಿದ್ದಾರೆ. ಮುಂಬೈ ಮೂಲದ ರಾಜೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರು. ನಾಲ್ಕು ಹಾಡುಗಳಿಗೆ ಎಂ.ಎನ್.ಕೃಪಾಕರ್ ಸಂಗೀತ, ವೀರೇಶ್ ಛಾಯಾಗ್ರಹಣ, ಬಸವರಾಜ್ ಸಂಕಲನ ಒದಗಿಸಿದ್ದಾರೆ.

JHANSI 4 copy

Share This Article
Leave a Comment

Leave a Reply

Your email address will not be published. Required fields are marked *